Categories: ಮನರಂಜನೆ

ಬಹುನಿರೀಕ್ಷೆಯ ‘ಪಠಾಣ್’  ಸಿನಿಮಾದತ್ತ ಎಲ್ಲರ ಚಿತ್ತ

ಎಲ್ಲವೂ ಅಂದುಕೊಂಡಂತೆ ಆದರೆ ಪಠಾಣ್  ಸಿನಿಮಾ ಜನವರಿ 25, 2023ಕ್ಕೆ ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಈ ಸಿನಿಮಾ ಪ್ರೇಕ್ಷರನ್ನು ಯಾವ ರೀತಿಯಲ್ಲಿ ಸೆಳೆಯ ಬಹುದು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಸಿನಿಮಾದ ಬಗ್ಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಮಾತನಾಡಿದ್ದು, ಜಾನ್ ಅವರನ್ನು ನಿಜಕ್ಕೂ ವಿನೂತನ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದ್ದಾರೆ. ಈಗಾಗಲೇ  ಪಠಾಣ್‍ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು, ಎಲ್ಲರ ಗಮನಸೆಳೆಯುತ್ತಿದೆ.

ಯಶ್ ರಾಜ್ ಫಿಲಂಸ್ ಅವರ ಅತ್ಯಂತ ದೊಡ್ಡ ಟೆಂಟ್‍ ಪೋಲ್  ಆಗಿರುವ ಈ ಸಿನಿಮಾ ಬಿಡುಗಡೆಗೆ ಇನ್ನು ಕೇವಲ 5 ತಿಂಗಳು ಬಾಕಿ ಇದೆ.   ಈ ನಡುವೆ ಸ್ಟುಡಿಯೊ ಜಾನ್ ಅಬ್ರಹಾಂ ಅವರನ್ನು ಪಠಾಣ್ ಚಿತ್ರದ ಖಳನಾಯಕನ ಫಸ್ಟ್ ಲುಕ್ ಬಿಡುಗಡೆ ಮಾಡಿದೆ! ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದ ಪ್ರತಿ ಪ್ರಕಟಣೆಯೂ ಜನರನ್ನು ಆಶ್ಚರ್ಯಗೊಳಿಸುತ್ತಿದೆ ಮತ್ತು ಇದರೊಂದಿಗೆ ಇಂಟರ್‍ನೆಟ್‍ನಲ್ಲಿ ಮೊಟ್ಟಮೊದಲ ಬಾರಿಗೆ ಶಾರೂಕ್ ಖಾನ್ ಅವರ ಲುಕ್ ಹಾಗೂ ದೀಪಿಕಾ ಪಡುಕೋಣೆ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದ್ದು,  ಈಗ ಜಾನ್ ಅಬ್ರಹಾಂ ಅವರನ್ನು ಸೂಪರ್ ಸ್ಲಿಕ್ ನೋಟದಲ್ಲಿ ತೋರಿಸಲಾಗಿದೆ. ಹೀಗಾಗಿ ಪಠಾಣ್ ಅಪಾರ ಕುತೂಹಲ ಹಾಗೂ ಆಸಕ್ತಿ ಸೃಷ್ಟಿಸಿದೆ. ವೈಆರ್‍ಎಫ್ ಮತ್ತು ಸಿದ್ಧಾರ್ಥ್ ನಿಯಮಿತ ಅವಧಿಯಲ್ಲಿ ಈ ಪ್ರಮುಖ ದೃಶ್ಯಗಳನ್ನು ಅನಾವರಣಗೊಳಿಸಿ ಕುತೂಹಲ ಹೆಚ್ಚಿಸಲು ಕಾರಣರಾಗಿದ್ದಾರೆ.

ಈ ಕುರಿತು ಸಿದ್ಧಾರ್ಥ್, “ಪಠಾಣ್‍ನ ಪ್ರತಿ ಪೋಸ್ಟ್ ಬಗ್ಗೆಯೂ ಅಭಿಮಾನಿಗಳು ಮತ್ತು ಪ್ರೇಕ್ಷಕರು ಕುತೂಹಲದ ನೋಟ ಬೀರಿದ್ದಾರೆ.  ಕಣ್ಣುಗಳ ಮುಂದೆ ಒಂದು ಮಹತ್ತರವಾದ ಒಗಟು ಬಿಡಿಸಿದಂತೆ ಆಗಿದ್ದು, ಅದು ನಮ್ಮ ಬಿಡುಗಡೆಯ ದಿನದತ್ತ ಕೊಂಡೊಯ್ಯುತ್ತಿದೆ. ಪಠಾಣ್‍ನ ಪ್ರತಿ ಅಸೆಟ್ ಕೂಡಾ ಬಹಳ ಚರ್ಚೆಗೆ ಒಳಗಾಗುತ್ತಿದೆ, ಏಕೆಂದರೆ ಅತ್ಯಂತ ಕುತೂಹಲ ಸೃಷ್ಟಿಸುವ ಕಂಟೆಂಟ್ ನಮ್ಮಲ್ಲಿದೆ ಎಂದು  ನಿರ್ದೇಶಕ ಸಿದ್ದಾರ್ಥ್ ಆನಂದ್ ಹೇಳಿದ್ದಾರೆ.

ಜಾನ್ ಅವರನ್ನು ಖಳರನ್ನಾಗಿಸುವ ನಿರ್ಧಾರ ಕುರಿತಂತೆ, ಮಾತನಾಡಿ, ಜಾನ್ ಅಬ್ರಹಾಂ ಪ್ರತಿನಾಯಕ, ಪಠಾಣ್ ಚಿತ್ರದ ಖಳ. ಮತ್ತು ಖಳನ  ಪ್ರಸ್ತುತಿ ದೊಡ್ಡದಾಗಿರಬೇಕು ಎನ್ನುವುದನ್ನು ನಾನು ಸದಾ ನಂಬುತ್ತೇನೆ, ಆದರೆ ನಾಯಕನಿಗಿಂತ ದೊಡ್ಡದಾಗಿ ಅಲ್ಲ. ಖಳ ಬೃಹತ್ತಾಗಿದ್ದಂತೆ ಅವರ ನಡುವಿನ ಸಂಘರ್ಷ ಅದ್ಭುತವಾಗಿರುತ್ತದೆ. ಹಾಗೂ ಶಾರೂಕ್  ಮತ್ತು ಜಾನ್ ನಡುವೆ ಅಸಾಧಾರಣ ಯುದ್ಧವನ್ನು ನಾವು ಕಾಣಬಹುದು! ನಾವು ಜಾನ್ ಅವರನ್ನು ಸೂಪರ್ ಕ್ಲಿಕ್ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದ್ದಾರೆ

ಶಾರೂಕ್, ದೀಪಿಕಾ ಪಡುಕೋಣೆ ಮತ್ತು ಈಗ ಜಾನ್ ಅವರ ಫಸ್ಟ್ ಲುಕ್‍ಗಳು ನಿಜಕ್ಕೂ ಪ್ರೇಕ್ಷಕರು ಈ ಚಲನಚಿತ್ರವನ್ನು ನೋಡುವತ್ತ ಕುತೂಹಲ ಕೆರಳಿಸಿದೆ. ಆದರೆ ಜನವರಿ ತನಕ ಕಾಯುವುದು ಅನಿವಾರ್ಯವಾಗಿದೆ

Ashika S

Recent Posts

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

3 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

9 mins ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

27 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

28 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

32 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

42 mins ago