Ad

‘ನಾನೇನು ಸತ್ತಿಲ್ಲ’: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಹೀಗೆ ಹೇಳಿದ್ಯಾಕೆ?

Ak

ಮುಂಬೈ: ಬಾಲಿವುಡ್ ‘ಕಿಲಾಡಿ’ ನಟ ಅಕ್ಷಯ್ ಕುಮಾರ್ ಅವರ ಮ್ಯಾಜಿಕ್ ಸದ್ಯ ಕೆಲಸ ಮಾಡ್ತಿಲ್ಲ. ಕರೋನಾ ನಂತರ, ಅಕ್ಷಯ್ ಅವರ ಬಹುತೇಕ ಎಲ್ಲಾ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲಾಗದೇ ಸೋತಿದೆ. ಇತ್ತೀಚೆಗೆ ಬಿಡುಗಡೆಯಾದ ‘ಸರ್ಫಿರಾ’ ಮತ್ತು ‘ಬಡೆ ಮಿಯಾನ್ ಛೋಟೆ ಮಿಯಾನ್’ ಚಿತ್ರಗಳ ಮೇಲೆ ನಟ ಅಕ್ಷಯ್ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು.

ಆದ್ರೆ ಅವರ ಈ ಚಿತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಅಕ್ಷಯ್ ಕುಮಾರ್ ಸದ್ಯ ತಮ್ಮ ಮುಂಬರುವ ಚಿತ್ರ ‘ಖೇಲ್ ಖೇಲ್ ಮೇ’ಗಾಗಿ ಪ್ರಚಾರದಲ್ಲಿದ್ದಾರೆ. ಅಕ್ಷಯ್ ಅವರ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ತಮ್ಮ ಈ ಹಿಂದಿನ ನಿರಂತರ ಫ್ಲಾಪ್ ಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಅಕ್ಷಯ್ ಅವರನ್ನು ಮಾಧ್ಯಮಗಳು ಫ್ಲಾಪ್‌ಗಳ ಬಗ್ಗೆ ಅವರು ಕೇಳಿದ್ರು, ‘ನಿಮ್ಮ ಚಿತ್ರಗಳು ಸೋಲಲು ಕಾರಣವೇನು? ಯಾಕೆ ಯಾವುದು ವರ್ಕ್ ಆಗ್ತಿಲ್ಲ?’ ಎಂಬೆಲ್ಲಾ ಪ್ರಶ್ನೆಗೆ ನಟ ಉತ್ತರಿಸಿದ್ದಾರೆ.

‘ನಾನು ಸತ್ತಿಲ್ಲ.. ಏನೇ ನಡೆದರೂ ಒಳ್ಳೆಯದಕ್ಕೆ’ ಫ್ಲಾಪ್ ಸಿನಿಮಾಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡಿರುವ ಅಕ್ಷಯ್​, ‘ಏನೇ ನಡೆದ್ರೂ ಒಳ್ಳೆಯದಕ್ಕೆ ಎಂದು ನಾನು ಭಾವಿಸುತ್ತೇನೆ. ನಾನು ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಪ್ರತಿ ನಿತ್ಯ ಒಬ್ಬರಲ್ಲ ಒಬ್ಬರು ಫೋನ್ ಮಾಡಿ, ಸಾರಿ ಫ್ರೆಂಡ್​, ಡೋಂಟ್ ವರಿ ಎನ್ನುತ್ತಾರೆ. ಆದ್ರೆ ನಾನು ಸತ್ತಿಲ್ಲ , ಇಲ್ಲೇ ಕೆಲಸ ಮಾಡುತ್ತಿದ್ದೇನೆ ಎಂದು ಅಕ್ಷಯ್ ಕುಮಾರ್ ಹೇಳಿದ್ರು. ಮತ್ತೆ ಒಳ್ಳೆಯ ಕಮ್ ಬ್ಯಾಕ್ ಮಾಡುವ ನಿರೀಕ್ಷೆ ಅಕ್ಷಯ್ ಅವರದ್ದಾಗಿತ್ತು.

Ad
Ad
Nk Channel Final 21 09 2023