ಅಭಿಮಾನಿಗಳ ಮನಗೆದ್ದ ‘ಓಎಂಜಿ 2’ ಸಿನಿಮಾ ಟೀಸರ್

ಅಕ್ಷಯ್ ಕುಮಾರ್ ನಟನೆಯ ‘ಓಎಂಜಿ 2’ ಸಿನಿಮಾದ ಟೀಸರ್ ಇಂದು (ಜುಲೈ 11) ರಿಲೀಸ್ ಆಗಿದೆ. ಅಕ್ಷಯ್ ಕುಮಾರ್ ಅವರು ಈ ಚಿತ್ರದಲ್ಲಿ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ‘ಓಎಂಜಿ 2’ ಚಿತ್ರದ ಟೀಸರ್ ಮೂಡಿ ಬಂದಿದೆ. ಟೀಸರ್​ನಲ್ಲಿ ಬರುವ ಒಂದಷ್ಟು ದೃಶ್ಯಗಳು ಜನಮನ ಗೆದ್ದಿವೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಪಂಕಜ್ ತ್ರಿಪಾಟಿ ಓರ್ವ ಆಸ್ತಿಕನ ಪಾತ್ರ ಮಾಡಿದ್ದಾರೆ. ದೇವರನ್ನು ನಂಬುವ ವ್ಯಕ್ತಿಯ ಪಾತ್ರದಲ್ಲಿ ಅವರು ಟೀಸರ್​​ನಲ್ಲಿ ಗಮನ ಸೆಳೆದಿದ್ದಾರೆ. ‘ನಂಬಿಕೆ ಇಡು, ನೀನು ಶಿವನ ದಾಸ’ ಎಂದು ಅಕ್ಷಯ್ ಕುಮಾರ್ ಅವರು ಪಂಕಜ್​ಗೆ ಹೇಳುವ ಡೈಲಾಗ್​ ಗಮನ ಸೆಳೆದಿದೆ. ರೈಲ್ವೆ ನಿಲ್ದಾಣದ ಬಳಿ ಶಿವನ ತಲೆಯ ಮೇಲೆ ನೀರು ಬೀಳುತ್ತಿರುತ್ತದೆ. ಹಿಂಭಾಗದಲ್ಲಿ ಚಂದಿರ ಕಾಣುತ್ತಿರುತ್ತಾನೆ. ಈ ದೃಶ್ಯ ಅನೇಕರಿಗೆ ಇಷ್ಟ ಆಗಿದೆ.

https://youtu.be/xZ1FXdIGf9Q 

‘ಓಎಂಜಿ 2’ ಚಿತ್ರವನ್ನು ಅಮಿತ್ ರಾಯ್ ಅವರು ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಅವರು ಶಿವನ ಪಾತ್ರ ಮಾಡುತ್ತಿದ್ದಾರೆ. ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

 

Ashitha S

Recent Posts

ಬಿಜೆಪಿ ಮುಖಂಡ ಅರೆಸ್ಟ್: ರಾತ್ರೋರಾತ್ರಿ ಠಾಣೆಯಲ್ಲಿ ಧರಣಿ ನಡೆಸಿದ ಶಾಸಕ ಹರೀಶ್ ಪೂಂಜಾ

ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್…

17 mins ago

ತಾಯಿ ಎದುರೇ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ

ತಾಯಿ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಪಾಟ್ನಾದ ನೌಬತ್‌ಪುರ ಪ್ರದೇಶದಲ್ಲಿ ಚಲಿಸುತ್ತಿದ್ದ…

21 mins ago

ರಘುಪತಿ ಭಟ್ ಆರೋಪಕ್ಕೆ ಡಾ. ಧನಂಜಯ ಸರ್ಜಿ ತಿರುಗೇಟು

ಶಿವಮೊಗ್ಗ ಹರ್ಷಾ ಹತ್ಯೆ ವೇಳೆ ಕಮ್ಯುನಿಸ್ಟರ ಜೊತೆ ಸರ್ಜಿ ಪೌಂಡೇಷನ್ ಶಾಂತಿ ನಡಿಗೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನೈರುತ್ಯ ಪದವೀಧರ…

36 mins ago

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

43 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

53 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

1 hour ago