Bengaluru 21°C
Ad

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ-ಉಮಾಪತಿ ಜೋಡಿ : ಫೋಟೋ ವೈರಲ್‌

ನಟ ಅರ್ಜುನ್ ಸರ್ಜಾ ಅವರ ಮಗಳು ಐಶೌರ್ಯ ಅವರು ತಮ್ಮ ಗೆಳೆಯನೊಂದಿ ನೆನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳ ಮದುವೆಯಲ್ಲಿ ಸುಂದರ ಜೋಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟ ಅರ್ಜುನ್ ಸರ್ಜಾ ಅವರ ಮಗಳು ಐಶೌರ್ಯ ಅವರು ತಮ್ಮ ಗೆಳೆಯನೊಂದಿ ನೆನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸರಳ ಮದುವೆಯಲ್ಲಿ ಸುಂದರ ಜೋಡಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಚೆನ್ನೈನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಇವರ ಮದುವೆ ನಡೆದಿದೆ. ಕುತೂಹಲದ ಸಂಗತಿ ಎಂದರೆ, ಈಗ ಮದುವೆಯಾಗಿರುವ ಹನುಮಾನ್​ ದೇಗುಲವನ್ನು ಅರ್ಜುನ್ ಸರ್ಜಾ ಅವರೇ ಕಟ್ಟಿಸಿದ್ದರು. ಇದೇ ದೇವಾಲಯದಲ್ಲಿ ಕಳೆದ ಅಕ್ಟೋಬರ್ 27 ರಂದು ಈ ಜೋಡಿಯ ಎಂಗೇಜ್​ಮೆಂಟ್​ ನಡೆದಿತ್ತು. ಈಗ ಅಲ್ಲಿಯೇ ಮದುವೆಯಾಗಿದ್ದು, ಇದರ ಫೋಟೋಗಳು ವೈರಲ್​ ಆಗಿವೆ.

ಉಮಾಪತಿ ಅವರು, ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಮಗನಾಗಿದ್ದು ಇವರು ಕೂಡ ತಮಿಳು ನಟ. 10-06-2024 ಎಂದಷ್ಟೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಡಿಬರಹ ನೀಡಿದ್ದಾರೆ. ಅಂದರೆ ನಿನ್ನೆ ಇವರ ಮದುವೆ ನಡೆದಿದೆ. ಇದು ಸರ್​ಪ್ರೈಸ್​ ಮದುವೆಯಾಗಿದ್ದು, ಹೆಚ್ಚಿನವರಿಗೆ ಇದರ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಕುತೂಹಲ.

Ad
Ad
Nk Channel Final 21 09 2023
Ad