ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಐಶ್ವರ್ಯ ರೈ ತಮ್ಮ ಮಗಳ ಜೊತೆ ಭಾಗಿಯಾಗಿದ್ದಾರೆ. ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಷಕರ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಇನ್ನೂ.. ಈ ಸಮಾರಂಭದಲ್ಲಿ ಪ್ರಶಸ್ತಿ ಪಡೆದಿದ್ದು ಐಶ್ವರ್ಯ ರೈ ಆದರೂ ಅಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಅವರ ಮಗಳು ಆರಾಧ್ಯ ಬಚ್ಚನ್. ಹೀಗಾಗಿಯೇ ಆ ಕಡೆ ಅಮ್ಮ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗ ಈ ಕಡೆ ಮಗಳ ಕಣ್ಣಲ್ಲಿ ಹರಿಯುತ್ತಿದ್ದ ಖುಷಿಯ ಮಿಂಚು ಅಲ್ಲಿದ್ದವರ ಚಿತ್ತವನ್ನೂ ಕದ್ದಿತ್ತು. ತನ್ನ ತಾಯಿಯ ಫೋಟೋಗಳನ್ನು ಆರಾಧ್ಯ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರೆ, ಸೈಮಾ ಕ್ಯಾಮರಾಗಳು ಆರಾಧ್ಯ ಅವರನ್ನು ಸೆರೆ ಹಿಡಿಯುತ್ತಿದ್ದವು.
ಹೌದು. . . ಸೈಮಾ ಅವಾರ್ಡ್ಸ್‌ನಲ್ಲಿ ಮಗಳು ಆರಾಧ್ಯ ಜೊತೆಗೆ ಐಶ್ವರ್ಯ ರೈ ಆಗಮಿಸಿದ್ದರು. ಮಗಳು ಮತ್ತು ಅಮ್ಮ ಇಬ್ಬರೂ ಇಲ್ಲಿ ವಿಭಿನ್ನಾಗಿಯೇ ಕಂಗೊಳಿಸಿದ್ದಾರೆ. ಕಪ್ಪು ಬಣ್ಣದ ಮತ್ತು ಸಿಲ್ವರ್ ಕಲರ್ ಇರೋ ವಿಶೇಷ ಕಾಸ್ಟೂಮ್‌ಗಳನ್ನೆ ಧರಿಸಿಕೊಂಡು ಇಲ್ಲಿ ಅಮ್ಮ ಮಗಳೂ ಕಾಣಿಸಿಕೊಂಡಿದ್ದಾರೆ.
ಐಶ್ವರ್ಯ ರೈ ಇಲ್ಲಿ ಲಾಂಗ್ ಗೌನ್ ತೊಟ್ಟು ಗಮನ ಸೆಳಿದ್ದಾರೆ. ಕ್ಯಾಮರಾಗೂ ಮಸ್ತ್ ಪೋಸ್ ಕೊಟ್ಟಿದ್ದಾರೆ. ಹಾಗೆ ಆರಾಧ್ಯ ಕೂಡ ಇಲ್ಲಿ ಸ್ಪೆಷಲ್ ಡ್ರೆಸ್ ತೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರೈ ಹಾಗೂ ಆರಾಧ್ಯ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.