ಆಂಧ್ರಪ್ರದೇಶ: ತಮಿಳು, ತೆಲುಗು ಚಿತ್ರಮಂದಿರಗಳಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ ಸ್ಟಾರ್ ಡ್ಯಾನ್ಸ್ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವು ಇದೀಗ ಚಿತ್ರೋದ್ಯಮದಲ್ಲಿ ದೊಡ್ಡ ಸುದ್ಧಿ ಮಾಡಿದೆ. ಇದೀಗ ಈ ಮದ್ಯೆ ಪತ್ನಿ ಸುಮಲತಾ ಕೇಸ್ಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಸೆ.16ರಂದು ಶೈಖ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್ ವಿರುದ್ಧ 21 ವರ್ಷದ ಅನಾಮಧೇಯ ಯುವತಿಯೊಬ್ಬಳು ತನ್ನ ಮೇಲೆ ಜಾನಿ ಮಾಸ್ಟರ್ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಈ ಪ್ರಕರಣ ದಾಖಲಿಸಿಕೊಂಡ ನರಸಿಂಗಿ ಪೊಲೀಸರು ಇದೀಗ ಜಾನಿಯನ್ನು ಗೋವಾದಲ್ಲಿ ಬಂಧಿಸಿ, ಹೈದರಾಬಾದ್ಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲೇ ಜಾನಿ ಅರೆಸ್ಟ್ ಆಗಿದ್ದಾರೆ ಎಂಬ ಸುದ್ದಿ ತಿಳಿದು ನೇರವಾಗಿ ಪೊಲೀಸ್ ಠಾಣೆಗೆ ಪತಿಯನ್ನು ಹುಡುಕಿಕೊಂಡು ಬಂದಿದ್ದ ಜಾನಿ ಪತ್ನಿ ಸುಮಲತಾ, ಠಾಣೆಯಲ್ಲಿ ಪೊಲೀಸರ ವಿರುದ್ಧವೇ ಗಲಾಟೆ ಮಾಡಿದ್ದರು. ಆದ್ರೆ, ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಸುಮಲತಾ, ಪತಿಯ ಕೇಸ್ಗೆ ಹೊಸ ಟ್ವಿಸ್ಟ್ ತಂದಿದ್ದಾರೆ.
‘ಅವಳು ನನ್ನ ಪತಿಯನ್ನು ಮನೆಗೆ ಬರಲು ಬಿಡುತ್ತಿರಲಿಲ್ಲ ಮತ್ತು ಕೇವಲ 2ರಿಂದ3 ಗಂಟೆಗಳ ಕಾಲ ಮಾತ್ರ ನನ್ನ ಮನೆಯಲ್ಲಿರುವಂತೆ ಹೇಳುತ್ತಿದ್ದಳು. ಒಮ್ಮೆ ಆಕೆಯನ್ನು ನೇರವಾಗಿ ಪ್ರಶ್ನಿಸಿದ ನನಗೆ ಆಕೆ ಕೊಟ್ಟ ಉತ್ತರ ಶೂನ್ಯ. ಯಾವುದನ್ನು ಒಪ್ಪಿಕೊಳ್ಳಲು ಅವಳು ರೆಡಿಯಿರಲ್ಲಿಲ್ಲ. ಜಾನಿ ಮಾಸ್ಟರ್ ನನ್ನ ಸಹೋದರ, ನೀವು ನನ್ನ ಅತ್ತಿಗೆ ಎಂದು ಕರೆಯುತ್ತಿದ್ದಳು. ಶ್ರೀಮಂತ ಪುರುಷರೇ ಈಕೆಯ ಟಾರ್ಗೆಟ್. ಪ್ರೀತಿಯ ಹೆಸರಿನಲ್ಲಿ ಬಲೆಗೆ ಬೀಳಿಸಿಕೊಂಡು, ಹೀಗೆ ಚಿತ್ರಹಿಂಸೆ ನೀಡುತ್ತಾಳೆ. ಈ ಸಮಸ್ಯೆಯ ಬಗ್ಗೆ ಚುರುಕು ತನಿಖೆ ನಡೆಸಿ, ನನಗೆ ಮತ್ತು ನನ್ನ ಮಕ್ಕಳಿಗೆ ನ್ಯಾಯ ಒದಗಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಾನು ಮನವಿ ಮಾಡುತ್ತೇನೆ’ ಎಂದು ಸುಮಲತಾ ಹೇಳಿದ್ದಾರೆ,