ಸದ್ಯ ವನಿತಾ ಅವರಿಗೆ 43 ವರ್ಷ ವಯಸ್ಸು. ಈ ಪ್ರಾಯದಲ್ಲಿ ಅವರು ಮದುವೆ ಆಗಲು ಸಜ್ಜಾಗಿದ್ದಾರೆ. ಇದು ಅವರ ಮೊದಲ ಮದುವೆ ಅಲ್ಲ. ಈಗಾಗಲೇ 3 ಬಾರಿ ಮದುವೆ ಆಗಿ ವಿಚ್ಛೇದನ ಪಡೆದಿರುವ ಅವರಿಗೆ ಇದು 4ನೇ ಮದುವೆ!
ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ನಟಿ ಮಂಜುಳಾ ಅವರ ಹಿರಿಯ ಪುತ್ರಿ ವನಿತಾ ವಿಜಯಕುಮಾರ್. ತಮ್ಮ 15 ನೇ ವಯಸ್ಸಿನಲ್ಲಿಯೇ ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಪಡೆದರು. ಆ ಸಾಲಿನಲ್ಲಿ ನಟ ವಿಜಯ್ ಜೊತೆಗೆ ವನಿತಾ ವಿಜಯಕುಮಾರ್ 1995 ರಲ್ಲಿ ನಟಿಸಿದ್ದ ‘ಚಂದ್ರಲೇಖಾ’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದು ಸೋಲು ಕಂಡಿತು. ಇದಾದ ಬಳಿಕ ‘ಮಾಣಿಕ್ಯಂ’ ಚಿತ್ರದಲ್ಲಿ ನಟಿಸಿದ ವನಿತಾ ವಿಜಯಕುಮಾರ್, ತೆಲುಗು ಮತ್ತು ಮಲಯಾಳಂನಲ್ಲಿ ತಲಾ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ.
ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ವನಿತಾ ವಿಜಯ್ಕುಮಾರ್ ಅವರಿಗೆ ಉತ್ಸಾಹ ಕಡಿಮೆ ಆಗಿಲ್ಲ. ಈಗ ಕೋರಿಯೋಗ್ರಾಫರ್ ರಾಬರ್ಟ್ ಜೊತೆ ಅವರಿಗೆ ಪ್ರೀತಿ ಚಿಗುರಿದೆ. ಅಕ್ಟೋಬರ್ 5ರಂದು ಅವರು ಮದುವೆ ಆಗುವ ಸಾಧ್ಯತೆ ಇದೆ. ಇದು ಪ್ರಚಾರದ ಗಿಮಿಕ್ ಕೂಡ ಆಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.