Bengaluru 29°C
Ad

ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟಿ ಸುನೈನಾ

ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾ ಮೂಲಕ ಪರಿಚಿತರಾದ ಸುನೈನಾ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತು ನಟಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾ ಮೂಲಕ ಪರಿಚಿತರಾದ ಸುನೈನಾ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತು ನಟಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಸೀಕ್ರೆಟ್ ಆಗಿ ಎಂಗೇಜ್‌ಮೆಂಟ್ ಆಗಿರುವ ಬಗ್ಗೆ ಸುದ್ದಿ ವೈರಲ್ ಆಗ್ತಿದ್ದಂತೆ ಸುನೈನಾ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಿಶ್ಚಿತಾರ್ಥದ ಸುದ್ದಿ ನಿಜ ಎಂದು ಒಪ್ಪಿಕೊಂಡಿದ್ದಾರೆ.

ಭಾವಿ ಪತಿ ಜೊತೆ ರಿಂಗ್ ತೊಟ್ಟಿರುವ ಫೋಟೋವನ್ನು ಶೇರ್ ಮಾಡಿ, ತನಗೆ ಅಭಿನಂದನೆ ಸಲ್ಲಿಸಿದ್ದಕ್ಕಾಗಿ ಎಲ್ಲರಿಗೂ ಮುಂಚಿತವಾಗಿ ಧನ್ಯವಾದಗಳು ಎಂದಿದ್ದಾರೆ.

ಆದರೆ ಭಾವಿ ಪತಿ ಜೊತೆಗಿನ ಫೋಟೋ ಆಗಲಿ ಯಾವುದೇ ವಿವರವನ್ನು ಸುನೈನಾ ಹಂಚಿಕೊಂಡಿಲ್ಲ. ಈ ವರ್ಷದ ಅಂತ್ಯದಲ್ಲಿ ಮದುವೆ ಜರುಗಲಿದೆ ಎನ್ನಲಾಗಿದೆ. 2008ರಲ್ಲಿ ಪ್ರಜ್ವಲ್ ದೇವರಾಜ್ನಟನೆಯ ‘ಗಂಗೆ ಬಾರೆ ತುಂಗೆ ಬಾರೆ’ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾದರು.

Ad
Ad
Nk Channel Final 21 09 2023
Ad