News Karnataka Kannada
Monday, April 29 2024
ಮನರಂಜನೆ

‘ಕ್ಯಾಪ್ಟನ್ ಮಿಲ್ಲರ್’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿಗೆ ಲೈಂಗಿಕ ಕಿರುಕುಳ

Actress sexually harassed at 'Captain Miller' pre-release event
Photo Credit : News Kannada

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಸಂಖ್ಯೆ ದಿನ ಹೆಚ್ಚಾಗುತ್ತಿದೆ. ಸಾಮಾನ್ಯ ಮಹಿಳೆಯರಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಗಳವರೆಗೂ ಕಿರುಕುಳವನ್ನು ಅನುಭವಿಸಿದವರಿಲ್ಲ ಇಂತದ್ದೇ ಒಂದು ಘಟನೆ ಕ್ಯಾಪ್ಟನ್ ಮಿಲ್ಲರ್ ಪ್ರೀ ಸಿನಿಮಾ ರಿಲೀಸ್ ಕಾರ್ಯಕ್ರಮದಲ್ಲಿ ನಡೆದಿದೆ.

ತಮಿಳು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’ನ ಪ್ರೀ ರಿಲೀಸ್ ಕಾರ್ಯಕ್ರಮ ಚೆನ್ನೈನ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಧನುಶ್ ಸೇರದಂತೆ ಹಲವು ನಟ-ನಟಿಯರು ತಮಿಳು ಸಿನಿಮಾರಂಗದ ಪ್ರಮುಖರು ಸಹ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ನಟಿಯೊಬ್ಬರು ಕಿರುಕುಳ ಎದುರಿಸಿದ್ದು, ಕಿರುಕುಳ ನೀಡಿದವನ ಹಿಡಿದು ನಟಿಯೇ ಥಳಿಸಿದ್ದಾರೆ. ಆ ಘಟನೆಯ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿ ಐಶ್ವರ್ಯಾ ರಘುಪತಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿಯೂ ಈ ನಟಿ ಭಾಗಿಯಾಗಿದ್ದರು. ಆ ಕಾರ್ಯಕ್ರಮದ ನಿರೂಪಣೆಯನ್ನೂ ಸಹ ಐಶ್ವರ್ಯಾ ರಘುಪತಿ ಅವರೇ ನಡೆಸಿಕೊಟ್ಟರು. ಆದರೆ ಕಾರ್ಯಕ್ರಮ ಮುಗಿಸಿ ಹೊರಡುವಾಗ ವ್ಯಕ್ತಿಯೊಬ್ಬ ಐಶ್ವರ್ಯಾ ರಘುಪತಿ ಅವರೊಟ್ಟಿಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ. ಐಶ್ವರ್ಯಾರ ದೇಹ ಭಾಗವನ್ನು ಅಶ್ಲೀಲವಾಗಿ ಮುಟ್ಟಿದ್ದಾನೆ. ಕೂಡಲೇ ಆಕ್ರೋಶಗೊಂಡ ನಟಿ, ಆತನನ್ನು ಹಿಡಿದು ಎಲ್ಲರೆದರು ಭಾರಿಸಿದ್ದಾರೆ. ಮಾತ್ರವಲ್ಲದೆ ಆತನನ್ನು ನಿಂದಿಸಿ, ಕಾಲಿಗೆ ಬೀಳುವಂತೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಹಂಚಿಕೊಂಡಿರುವ ಐಶ್ವರ್ಯಾ ರಘುಪತಿ, ‘ಆ ಜನಜಂಗುಳಿಯಲ್ಲಿ ಒಬ್ಬ ವ್ಯಕ್ತಿ ನನ್ನೊಟ್ಟಿಗೆ ಅನುಚಿತವಾಗಿ ವರ್ತಿಸಿದ. ಕೂಡಲೇ ನಾನು ಅವನನ್ನು ಹಿಡಿದುಕೊಂಡೆ. ನಾನು ಹೊಡೆಯುವ ವರೆಗೆ ನನ್ನ ಬಿಗಿ ಹಿಡಿತ ಸಡಿಸಲಿಲ್ಲ, ಅವನು ಓಡಿ ಹೋಗಲು ಯತ್ನಿಸಿದ, ಬಿಡದೆ ಬೆನ್ನಟ್ಟಿ ಹೊಡೆದು ಕೋಪ ತೀರಿಸಿಕೊಂಡೆ. ಮಹಿಳೆಯ ದೇಹದ ಭಾಗವನ್ನು ಹಿಡಿದುಕೊಳ್ಳು ಅದೆಷ್ಟು ಧೈರ್ಯ ಅವನಿಗೆ, ಇದು ನನಗೆ ಅತೀವ ಕೋಪ ತರಿಸಿತ್ತು, ಹಾಗಾಗಿಯೇ ನಾನು ಅವನನ್ನು ಎದುರಿಸಿದೆ’ ಎಂದಿದ್ದಾರೆ ನಟಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು