Bengaluru 29°C
Ad

ಬುರ್ಕಾ ಧರಿಸಿ ವಿಚಾರಣೆಗೆ ಬಂದ ನಟಿ ಹೇಮಾ : ಬಂಧಿಸಿದ ಪೊಲೀಸರು

ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಬರಲು 2 ನೋಟಿಸ್ ನೀಡಿದ್ದರು ಹೇಮಾ ಅವರು ಹಾಜರಾಗಿರಲಿಲ್ಲ. ಇದೀಗ 3ನೇ ನೋಟಿಸ್ ನೀಡಿದ್ದು ಇಂದು ಹೇಮಾ ಅವರು ವಿಚಾರಣೆಗೆ ಆಗಮಿಸಿದ್ದರು.

ಬೆಂಗಳೂರು : ಹೊರವಲಯದಲ್ಲಿ ನಡೆದ ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ಚಿತ್ರರಂಗದ ನಟಿ ಹೇಮಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆ ಬರಲು 2 ನೋಟಿಸ್ ನೀಡಿದ್ದರು ಹೇಮಾ ಅವರು ಹಾಜರಾಗಿರಲಿಲ್ಲ. ಇದೀಗ 3ನೇ ನೋಟಿಸ್ ನೀಡಿದ್ದು ಇಂದು ಹೇಮಾ ಅವರು ವಿಚಾರಣೆಗೆ ಆಗಮಿಸಿದ್ದರು.

ಜನರಿಗೆ ಮುಖ ಕಾಣಬಾರದು ಎಂಬ ಉದ್ದೇಶದಿಂದ ಅವರು ಬುರ್ಕಾ ಧರಿಸಿದ್ದಾರೆ. ಪಾರ್ಟಿಯಲ್ಲಿ ಹೇಮಾ ಡ್ರಗ್ಸ್​ ಸೇವಿಸಿದ್ದರು ಎಂಬುದು ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಅಲ್ಲದೇ ಡ್ರಗ್ಸ್​ ಪಾರ್ಟಿಯಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂಬ ಮಾಹಿತಿ ಇದೆ.

ವಶಕ್ಕೆ ಪಡೆದಿರುವ ನಟಿ ಹೇಮಾಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ವಿಚಾರಣೆ ಬಳಿಕ ಸಿಸಿಬಿ ಪೊಲೀಸರು ನಟಿ ಹೇಮಾ ಅವರನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023
Ad