Bengaluru 22°C
Ad

ದರ್ಶನ್ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ನಟ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ದರ್ಶನ್ ಅರೆಸ್ಟ್ ಆದ ಬಳಿಕ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ದರ್ಶನ್ ಅರೆಸ್ಟ್ ಆದ ಬಳಿಕ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಖಂಡಿತವಾಗಿ ಈ ಪ್ರಕರಣದಿಂದ ಎಲ್ಲರಿಗೂ ನೋವಾಗಿದೆ. ಸದ್ಯದಲ್ಲೇ ತೀರ್ಪು ಬರುತ್ತೆ ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದ್ದಾರೆ.

ಇಂಡಸ್ಟ್ರಿಯಲ್ಲಿ ಇರುವವರಿಗೂ ನೋವಾಗಿದೆ. ಯಾಕಂದ್ರೆ ನಾವೆಲ್ಲಾ ಒಂದೇ ಫ್ಯಾಮಿಲಿ. ಯಾರದೇ ತಪ್ಪಾಗಲಿ, ಸರಿಯಾಗಲಿ ನೋವಂತೂ ಎಲ್ಲರಿಗೂ ಆಗುತ್ತೆ. ಜನಗಳಿಗೂ ಅದೇ ಭಾವನೆ ಇದೆ. ಈ ಘಟನೆ ಆಗಬಾರದು ಅನ್ನೋದು ಎಲ್ಲರಲ್ಲೂ ಇದೆ. ಇನ್ನೂ ತನಿಖೆ ನಡೆಯುತ್ತಿದೆ. ಮಾಧ್ಯಮಗಳಲ್ಲಿ ತೋರಿಸುತ್ತಾ ಇರೋದನ್ನೇ ನಾವು ನೋಡುತ್ತಾ ಇದ್ದೇವೆ.

ಈ ವಿಚಾರದಲ್ಲಿ ನಾವು ಜಡ್ಜ್‌ಮೆಂಟ್ ಕೊಡೋಕೆ ಆಗಲ್ಲ. ಇವ್ರು ಸರಿ ಇವ್ರು ತಪ್ಪು ಅಂತ ಹೇಳೋಕೆ ಆಗಲ್ಲ. ಸದ್ಯದಲ್ಲೇ ತೀರ್ಪು ಬರುತ್ತೆ. ನಾವೆಲ್ಲಾ ಒಪ್ಪಿಕೊಳ್ಳಲೇ ಬೇಕು. ಒಂದು ನ್ಯಾಯ ವ್ಯವಸ್ಥೆ ಇದೆ. ಕೋರ್ಟ್‌ಗೆ ನಾವು ಗೌರವ ಕೊಡಬೇಕು. ಖಂಡಿತ ಒಂದು ರಿಸಲ್ಟ್ ಹೊರ ಬರುತ್ತೆ. ಅದಕ್ಕೆ ನಾವು ಕಾಯಬೇಕು ಅದನ್ನೇ ನಾವು ಮಾಡುತ್ತಿದ್ದೇವೆ ಅಷ್ಟೇ ಎಂದು ಉಪೇಂದ್ರ ಹೇಳಿದ್ದಾರೆ.

Ad
Ad
Nk Channel Final 21 09 2023