ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಇಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಕ್ಷೇತ್ರದ ವತಿಯಿಂದ ಶ್ರೀಮುರಳಿಗೆ ವೆಂಕಟರಮಣ ಆಸ್ರಣ್ಣ ಅವರು ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು. ಬಳಿಕ ಮಾಧ್ಯಮಕ್ಕೆ ಮಾತನಾಡಿದ ನಟ, ನವರಾತ್ರಿ ಶುಭ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ. ನಾನು ಬಾಲ್ಯದಲ್ಲಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಇದೀಗ ಮತ್ತೆ ಇಲ್ಲಿಗೆ ಬರುವ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ನಾನು ನಟಿಸಿರುವ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.
Ad