Bengaluru 23°C
Ad

ಬ್ರೈನ್ ಹ್ಯಾಮ್ರೇಜ್‌ನಿಂದ ಆಸ್ಪತ್ರೆ ದಾಖಲಾದ ನಟಿ ರಿಷ್ತಾ ನಿಧನ

Rishta Laboni

ಢಾಕಾ: ಬ್ರೈನ್ ಹ್ಯಾಮ್ರೇಜ್‌ನಿಂದ ಆಸ್ಪತ್ರೆ ದಾಖಲಾಗಿದ್ದ ಮಾಡೆಲ್ ಕಮ್ ನಟಿ ರಿಷ್ತಾ ಲಬೊನಿ ಶಿಮಾನ (39) ನಿಧನರಾಗಿದ್ದಾರೆ. ಕಳೆದ 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಿಷ್ತಾ  ಮೃತಪಟ್ಟಿದ್ದಾರೆ.

ಬಾಂಗ್ಲಾದೇಶದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ರಿಷ್ತಾ ಬ್ರೈನ್ ಮೇ.21ರಂದು ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ನಟಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು.

ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಟಿ ಮೃತಪಟ್ಟಿದ್ದಾರೆ. ನಟಿ ಸಾವಿನ ಸುದ್ದಿಯನ್ನು ಸಹೋದರ ಇಜಾಜ್ ಬಿನ್ ಹಾಗೂ ಮಾಜಿ ಪತಿ ಪರ್ವೇಜ್ ಸಜ್ಜದ್ ಖಚಿತಪಡಿಸಿದ್ದಾರೆ. ಬಾಂಗ್ಲಾದ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಿಷ್ತಾ 2014ರಲ್ಲಿ ಗಾಯಕ ಪರ್ವೆಜ್ ಸಜ್ಜದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016ರಲ್ಲಿ ತಾಯಿಯಾಗಿ ಬಡ್ತಿ ಪಡೆದ ನಟಿ ಸಿನಿಮಾದಿಂದ ದೂರ ಉಳಿದಿದ್ದರು.

Ad
Ad
Nk Channel Final 21 09 2023
Ad