Bengaluru 23°C
Ad

ಮುಚ್ಚಿದ್ದ ದೇವಸ್ಥಾನ ತೆರೆಸಿ ಜೀರ್ಣೋದ್ಧಾರ ಕಾರ್ಯ ಮಾಡಿಸಿದ ನಟ ನಿಖಿಲ್ ಸಿದ್ಧಾರ್ಥ್

‘ಕಾರ್ತಿಕೇಯ 2’, ‘18 ಪೇಜಸ್’ ಸಿನಿಮಾಗಳ ಜನಮನ ಗೆದ್ದಿರುವ  ನಿಖಿಲ್ ಸಿದ್ಧಾರ್ಥ್, ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ತಮ್ಮ ‘ಕಾರ್ತಿಕೇಯ’ ಸಿನಿಮಾದಲ್ಲಿ ಮಾಡಿರುವಂತೆಯೇ ಮುಚ್ಚಿದ ದೇವಾಲಯವೊಂದನ್ನು ತೆರೆಯುವ ಕಾರ್ಯವನ್ನು ನಟ ನಿಖಿಲ್ ಮಾಡಿದ್ದಾರೆ.

‘ಕಾರ್ತಿಕೇಯ 2’, ‘18 ಪೇಜಸ್’ ಸಿನಿಮಾಗಳ ಜನಮನ ಗೆದ್ದಿರುವ  ನಿಖಿಲ್ ಸಿದ್ಧಾರ್ಥ್, ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ತಮ್ಮ ‘ಕಾರ್ತಿಕೇಯ’ ಸಿನಿಮಾದಲ್ಲಿ ಮಾಡಿರುವಂತೆಯೇ ಮುಚ್ಚಿದ ದೇವಾಲಯವೊಂದನ್ನು ತೆರೆಯುವ ಕಾರ್ಯವನ್ನು ನಟ ನಿಖಿಲ್ ಮಾಡಿದ್ದಾರೆ.

ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯ ಗ್ರಾಮದಲ್ಲಿ ವರ್ಷಗಳಿಂದಲೂ ದೇವಾಲಯವೊಂದು ಬಾಗಿಲು ಹಾಕಿತ್ತು. ಈ ದೇವಾಲಯವನ್ನು ಮತ್ತೆ ತೆರೆಯುವ ಕಾರ್ಯವನ್ನು ನಿಖಿಲ್ ಮಾಡಿರುವುದಲ್ಲದೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಮಾಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡಿರುವ ನಿಖಿಲ್, ‘ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿಸಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂತಸ ನೋಡಿ ಖುಷಿಯಾಯ್ತು’ ಎಂದಿದ್ದಾರೆ.

ದೇವಾಲಯವನ್ನು ಮತ್ತೆ ತೆರೆದ ನಿಖಿಲ್ ಮೇಲೆ ಆ ಊರಿನ ಗ್ರಾಮಸ್ಥರು ಹೂವು ಸುರಿದು ಸಂತಸ ವ್ಯಕ್ತಪಡಿಸಿದ್ದಾರೆ.

ಇದೀಗ ‘ಸ್ವಯಂಭು’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಇಂಡಿಯನ್ ಹೌಸ್’ ಹೆಸರಿನ ಸ್ವಾತಂತ್ರ್ಯ ಹೋರಾಟದ ಕತೆಯುಳ್ಳ ಸಿನಿಮಾದಲ್ಲಿ ನಟಿಸಲಿದ್ದಾರೆ.

ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದು, ಅಂಥಹುದೇ ಸಿನಿಮಾಗಳ ಮೇಲೆ ಗಮನ  ಕೇಂದ್ರೀಕರಿಸಿದ್ದಾರೆ. ಇದೀಗ ನಟ ನಿಖಿಲ್ ಮಾಡಿರುವ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Ad
Ad
Nk Channel Final 21 09 2023
Ad