ಮುಂಬೈ: ನಟ ಮತ್ತು ಶಿವಸೇನೆ ಮುಖಂಡ ಗೋವಿಂದ ಅವರು ಆಕಸ್ಮಿಕವಾಗಿ ತಮ್ಮ ಸ್ವಂತ ರಿವಾಲ್ವರ್ ನಿಂದ ಕಾಲಿಗೆ ಗುಂಡು ಹಾರಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಗೋವಿಂದ ಬೆಳಿಗ್ಗೆ ತನ್ನ ರಿವಾಲ್ವರ್ ನ್ನು ಕ್ಲೀನ್ ಮಾಡುವಾಗ ಆಕಸ್ಮಿಕವಾಗಿ ಗುಂಡು ಅವರ ಕಾಲಿಗೆ ಬಂದು ತಗುಲಿದೆ ಎಂದು ವರದಿಯಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
Ad