ನಂಜನಗೂಡು: ವಿವಾಹ ಸಮಾರಂಭ ಹಿನ್ನಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ನಟ ಡಾಲಿ ಧನಂಜಯ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯಕ್ಕೆ ನಟ ಡಾಲಿ ಧನಂಜಯ ಆಗಮಿಸಿದ ಹಿನ್ನಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ರವರು ಡಾಲಿಗೆ ಸಾಥ್ ನೀಡಿದ್ದಾರೆ.
ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ನಟ ಡಾಲಿ ಧನಂಜಯ ಒಟ್ಟಿಗೆ ದೇವಾಲಯಕ್ಕೆ ತೆರಳಿ ನಂಜುಂಡೇಶ್ವರನಿಗೆ ಲಗ್ನ ಪತ್ರಿಕೆ ಇಟ್ಟು ವಿಶೇಷ ಪೂಜೆ ಮಾಡಿಸಿದರು. ಶ್ರೀ ನಂಜುಂಡಸ್ವಾಮಿ, ಪಾರ್ವತಮ್ಮ, ಚಂಡಿಕೇಶ್ವರ, ಗಣಪತಿ, ನಾರಾಯಣಸ್ವಾಮಿ, ಸುಬ್ರಹ್ಮಣ್ಯ ದೇವಾಲಯಗಳ ಪ್ರದರ್ಶನ ಹಾಕಿದರು.
ವಿವಾಹ ಸಮಾರಂಭದ ಹಿನ್ನಲೆಯಲ್ಲಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿದ್ದೇನೆ. ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರನ್ನು ಆಹ್ವಾನಿಸಿ ಮದುವೆಗೆ ಆಮಂತ್ರಣ ಪತ್ರಿಕೆ ನೀಡಿದ್ದೇನೆ ಎಂದು ನಟ ಡಾಲಿ ಧನಂಜಯ ಹೇಳಿದ್ದಾರೆ.
ನೆಚ್ಚಿನ ನಟ ಡಾಲಿ ಧನಂಜಯನನ್ನು ನೋಡಲು ನೂರಾರು ಅಭಿಮಾನಿಗಳು ದೇವಾಲಯದಲ್ಲಿ ನೆರೆದಿದ್ದರು. ಅಚ್ಚುಮೆಚ್ಚಿನ ನಟನ ಜೊತೆ ಸ್ಪೆಲ್ಪಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.
ಈ ಸಂದರ್ಭದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್, ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿಎಂ ಶಂಕರ್, ರಾಜೇಶ್ ಸೇರಿದಂತೆ ಹಲವರು ಹಾಜರಿದ್ದರು.