ಮುಂಬೈ: ಧರ್ತಿಪುತ್ರ, ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ 22 ವರ್ಷದ ನಟ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮುಂಬೈನ ಜೋಗೇಶ್ವರಿ ಹೆದ್ದಾರಿಯಲ್ಲಿ ನಟನ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಧಾರಾವಾಹಿ ಬರಹಗಾರ ಧೀರಜ್ ಮಿಶ್ರಾ ತಿಳಿಸಿದ್ದಾರೆ
ಧರ್ತಿಪುತ್ರ ನಂದಿನಿ ಟಿವಿ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಿವಿ ನಟ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರಿಗೆ 22 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಧರ್ತಿಪುತ್ರ ನಂದಿನಿ ಸೀರಿಯಲ್‌ನ ಬರಹಗಾರ ಧೀರಜ್ ಮಿಶ್ರಾ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಅಮನ್ ಆಡಿಷನ್‌ಗೆ ಹೋಗುತ್ತಿದ್ದರು. ಜೋಗೇಶ್ವರಿ ಹೆದ್ದಾರಿಯಲ್ಲಿ ಹೋಗುವಾಗ ಅವರ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದಿದೆ’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಟ್ರಕ್ ಚಾಲಕನ ವಿರುದ್ಧ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.