Ad

ʻಥಗ್‌ ಲೈಫ್‌ʼ ಚಿತ್ರೀಕರಣ ವೇಳೆ ಅವಘಡ : ನಟನ ಕಾಲಿನ ಮೂಳೆ ಮುರಿತ

ಕಮಲ್‌ ಹಾಸನ್‌ ಅವರ ʻಥಗ್‌ ಲೈಫ್‌ʼ ಸಿನಿಮಾದ ಚಿತ್ರೀಕರಣದ ವೇಳೆ ಅಪಘಾತವಾಗಿರುವ ಕುರಿತು ವರದಿಯಾಗಿದೆ.ಪುದುಚೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಕೊಚ್ಚಿ: ಕಮಲ್‌ ಹಾಸನ್‌ ಅವರ ʻಥಗ್‌ ಲೈಫ್‌ʼ ಸಿನಿಮಾದ ಚಿತ್ರೀಕರಣದ ವೇಳೆ ಅಪಘಾತವಾಗಿರುವ ಕುರಿತು ವರದಿಯಾಗಿದೆ.ಪುದುಚೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

Ad
300x250 2

ಮಾಲಿವುಡ್‌ ನಟ ಜೋಜು ಜಾರ್ಜ್ ಅವರ ಪಾತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಯೋಜನೆ ಪ್ರಕಾರ ಹೆಲಿಕಾಪ್ಟರ್‌ ಯೊಂದರಿಂದ ಅವರು ಜಗಿಯುವ ದೃಶ್ಯವನ್ನು ಸೆರೆಹಿಡಿಯಬೇಕಿತ್ತು. ಅದೇ ರೀತಿ ನಟ ತನ್ನ ಸಹ ನಟನೊಂದಿಗೆ ಜಿಗಿಯುವ ವೇಳೆ ನಟ ಮಗುಚಿ ಬಿದ್ದಿದ್ದಾರೆ, ಪರಿಣಾಮ ಅವರ ಎಡಗಾಲಿಗೆ ಪೆಟ್ಟಾಗಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಎಡಗಾಲು ಮೂಳೆ ಮುರಿತವಾಗಿದೆ.

ಕನಿಷ್ಠ ಒಂದು ವಾರದ ವಿಶ್ರಾಂತಿ ಪಡೆಯಬೇಕಿಂದು ವೈದ್ಯರು ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ. ವೈದ್ಯರ ಸೂಚನೆಯ ಹೊರತಾಗಿಯೂ ನಟ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗಿದೆ.

 

Ad
Ad
Nk Channel Final 21 09 2023
Ad