Bengaluru 23°C
Ad

10 ವರ್ಷಗಳಿಂದ ಲಿವ್‌ ಪವಿ ಜತೆ ಇನ್‌ ರಿಲೇಷನ್‌ಶಿಪ್‌; ದರ್ಶನ್​ ಒಪ್ಪಿಕೊಂಡ ಸತ್ಯ ಇದು

Dbss

ಬೆಂಗಳೂರು: “ಪವಿತ್ರಾ ಗೌಡ ಜೊತೆ ನಾನು 10 ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ ಶಿಪ್‌ನಲ್ಲಿ ಇದ್ದೇನೆ” ಎಂದು ನಟ ದರ್ಶನ್‌ ಹೇಳಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ದರ್ಶನ್‌ ಅವರು ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ. ಪವಿತ್ರಾಗೌಡ ಜೊತೆ ಸುಮಾರು 10 ವರ್ಷಗಳಿಂದ ನಾನು ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದೇನೆ. ಪವಿತ್ರಾ ಗೌಡ ಆರ್‌ಆರ್‌ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರದಲ್ಲಿ ನೆಲೆಸಿದ್ದಾರೆ. ನನಗೆ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ದಿ. ಸೌಂದರ್ಯ ಜಗದೀಶ್ ಅವರು ಸುಮಾರು 10 ವರ್ಷ ಗಳಿಂದ ಪರಿಚಯವಿದ್ದಾರೆ.

2018 ರಲ್ಲಿ ನಾನು ಪವಿತ್ರಾ ಗೌಡಗೆ ಮನೆಯನ್ನು ಖರೀದಿಸಲು ಸ್ನೇಹಿತರಾದ ಸೌಂದರ್ಯ ಜಗದೀಶ್‌ ಅವರಿಂದ 1.75 ಕೋಟಿ ರೂ. ಸಾಲವನ್ನು ಪಡೆದಿದ್ದೆ. ಈ ಹಣವನ್ನು ನಾನು ಪವಿತ್ರಾ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದ್ದೆ. ಈ ಸಾಲದ ಹಣವನ್ನು 2 ವರ್ಷದ ಹಿಂದೆ ಸೌಂದರ್ಯ ಜಗದೀಶ್‌ ಅವರಿಗೆ ನನ್ನ ಬ್ಯಾಂಕ್‌ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ಈ ಹಣವ ಸಿನಿಮಾ ನಟನೆಗೆ ಪಡೆದ ಸಂಭಾವನೆಯಾಗಿರುತ್ತದೆ.

ನನ್ನ ಪತ್ನಿ ಗೃಹಿಣಿ, ಮಗ 10ನೇ ತರಗತಿ ವ್ಯಾಸಂಗ ಮಾಡುತ್ತಿರುತ್ತಾನೆ. ನಾನು, ವಿಜಯಲಕ್ಷ್ಮೀ ಮದುವೆಯಾಗಿ 22 ವರ್ಷವಾಗಿದೆ ಎಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ದರ್ಶನ್​​ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.

Ad
Ad
Nk Channel Final 21 09 2023