ನನ್ನ ದಾಂಪತ್ಯ ಜೀವನ ಹಾಳಾಗಲು ಶಿಲ್ಪಾಶೆಟ್ಟಿಗೆ ಕಾರಣ ಎಂದು ಶಿಲ್ಪ ಶೆಟ್ಟಿ ಪತಿಯ ಮೊದಲನೇ ಪತ್ನಿ ಕವಿತಾ. ಈ ಆರೋಪಕ್ಕೆ ಪ್ರತಿಯಾಗಿ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ರಾಜ್ ಕುಂದ್ರ ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಟಿ.ವಿ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ಶಿಲ್ಪಾ ಶೆಟ್ಟಿ ವಿರುದ್ಧ ಕವಿತಾ ಗಂಭೀರ ಆರೋಪ ಮಾಡಿದ್ದರು. ಈ ಸಂದರ್ಶನದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಕುರಿತು, ಬಾಲಿವುಡ್ ಸುದ್ದಿಗಳನ್ನು ಆನ್ಲೈನ್ನಲ್ಲಿ ಬಿತ್ತರಿಸುವ ‘ಪಿಂಕ್ ವಿಲ್ಲಾ’ಗೆ ನೀಡಿರುವ ಸಂದರ್ಶನದಲ್ಲಿ ರಾಜ್ ಕುಂದ್ರ ಸ್ಪಷ್ಟನೆ ನೀಡಿತು ಅವರ ಆರೋಪವನ್ನು ತಳ್ಳಿಹಾಕಿದ್ದಾರೆ.
ಕವಿತಾಗೆ 2006ರಲ್ಲಿ ವಿಚ್ಛೇದನ ನೀಡಿ 2009ರಲ್ಲಿ ಶಿಲ್ಪಾ ಶೆಟ್ಟಿಯನ್ನು ಮದುವೆಯಾದರು.
ಇನ್ನು ಕವಿತಾ ಅವರ ಆರೋಪದ ಕುರಿತು ಮಾತನಾಡಿದ ಅವರು, ಕವಿತಾ ಅವರು ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಈ ಬಗ್ಗೆ ಹಿಂದೆಯೇ ಸ್ಪಷ್ಟಪಡಿಸಲಾಗಿದೆ. ಅಷ್ಟೇ ಅಲ್ಲದೆ, ಅವರು ಸದಾ ನನ್ನ ಕುಟುಂಬದವರೊಂದಿಗೆ ಜಗಳವಾಡುತ್ತಿದ್ದರು. ಹಾಗೂ ನನ್ನ ತಂಗಿಯ ಗಂಡನ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಇದೆಲ್ಲ ಮುಗಿದು ಹೋದ ಘಟನೆ ಎಂದು ಸ್ಪಷ್ಟಪಡಿಸಿದ್ದಾರೆ.