Categories: ಮನರಂಜನೆ

“ರಾಬರ್ಟ್” ದರ್ಶನಕ್ಕೆ ದಾಖಲೆಗಳು ಧರಾಶಾಹಿ

ಕಳೆದೊಂದು ವರ್ಷದಿಂದ ಚಾತಕಪಕ್ಷಿಗಳಂತೆ ಕಾದು ಕುಳಿತಿದ್ದ ಸಿನಿಪ್ರಿಯರಿಗೆ ರಾಬರ್ಟ್ ಮನರಂಜನೆಯ ರಸದೌತಣ ಉಣಬಡಿಸಿದೆ.  ಶಿವರಾತ್ರಿ ದಿನದಂದು ನಿನ್ನೆ ಪ್ರೆಕ್ಷಕರಂಗಳಕ್ಕೆ ದಾಂಗುಡಿಯಿತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಬಹುನಿರೀಕ್ಷಿತ “ರಾಬರ್ಟ್” ಚಿತ್ರ ರಾಜ್ಯಾದ್ಯಂತ ಭರ್ಜರಿ ಒಪೆನಿಂಗ್ ಪಡೆದುಕೊಂಡಿದೆ.  ಬಹುದಿನಗಳ ನಂತರ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ದರ್ಶನ್ ಯಶಸ್ವಿಯಾಗಿದ್ದಾರೆ.

 

‘ರಾಬರ್ಟ್’ ಪಕ್ಕಾ ಮಾಸ್ ಎಂಟೆರ್ಟೈನೆರ್ ಆಗಿದ್ದು, ಪೈಸಾ ವಸೂಲ್ ಕಮರ್ಶಿಯಲ್ ಸಿನೆಮಾ. ಜೈ ಶ್ರೀರಾಮ್ ಹಾಡಿನೊಂದಿಗೆ ತೆರೆದುಕೊಳ್ಳುವ ಚಿತ್ರದುದ್ದಕ್ಕೂ ದರ್ಶನ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಕಲ್ಲೊಂದು ಶಿಲ್ಪವಾಗುವ ದಾಟಿಯಲ್ಲಿ ಸಾಗುವ ಕಥೆಯಲ್ಲಿ ದರ್ಶನ್ ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಸಿಗುತ್ತಾರೆ. ರೌದ್ರ-ಮುಗ್ದತೆಗಳ ಮಿಶ್ರಣ ಚಿತ್ರದಲ್ಲಿದೆ. ಸಾಮಾನ್ಯವಾಗಿ ನಟನೆಗೆ ವಿರಳ ಅವಕಾಶಗಳಿರುವ ಕಮರ್ಶಿಯಲ್ ಸಿನಿಮಾಗಳ ನಡುವಲ್ಲಿ ಈ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ. ದರ್ಶನ್ ಅಭಿನಯ ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. ಆಕ್ಷನ್ ದೃಶ್ಯಗಳಲ್ಲಂತೂ ಆಜಾನುಬಾಹು ದರ್ಶನ್ ಸಂಪೂರ್ಣ ಆವರಿಸುತ್ತಾರೆ. ಶಿವರಾಜ್ ಪಾತ್ರ ಇಷ್ಟವಾಗುತ್ತದೆ. ಚಿಕ್ಕಣ್ಣ ಒಂದೆರಡು ದೃಶ್ಯಗಳಲ್ಲಿ ಕಾಣಿಸಿದರೂ ನಗು ತರಿಸುತ್ತಾರೆ. ಉಳಿದಂತೆ ನಾಯಕಿ ಆಶಾ ಭಟ್ ಮೊದಲ ಚಿತ್ರದಲ್ಲೇ ಅಭಿನಯ ಮತ್ತು ನೃತ್ಯವೆರಡಕ್ಕೂ ನ್ಯಾಯ ಸಲ್ಲಿಸಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಜಗಪತಿ ಬಾಬು ಖಳನಾಯಕನಾಗಿ ಕೊಂಚ ನಿರಾಸೆ ಮೂಡಿಸಿದರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ರವಿಶಂಕರ್ ಖಳನಾಯಕನಾದರೂ ನಗಿಸುತ್ತಾರೆ.  ನಿರ್ದೇಶಕ ತರುಣ್ ಸುದೀರ್ ನಿರ್ದೇಶನ ವಿಭಿನ್ನವಾಗಿದ್ದು ಎಲ್ಲಾ ಆಯಾಮಗಳನ್ನೂ ಜಾಣ್ಮೆಯಿಂದ ಚಿತ್ರಿಸಿದ್ದಾರೆ. ನಿರ್ಮಾಪಕರು ಯಥೇಚ್ಛವಾಗಿ ಬಂಡವಾಳ ಹೂಡಿದ್ದು ಎದ್ದು ಕಾಣುತ್ತದೆ. ವಿನೋದ್ ಪ್ರಭಾಕರ್ ಮತ್ತು ದರ್ಶನ್ ಜೋಡಿಯ ಸ್ನೇಹ ಚಿತ್ರದ ಹೈಲೈಟ್. ಸೋನಲ್ ಮೊಂತೇರೋ ಮುಗ್ದ ಪಾತ್ರದಲ್ಲಿ ಇಷ್ಟವಾಗುತ್ತಾರೆ.  ಜೇಸನ್ ಡಿಸೋಜ ಮಗನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ದೇವರಾಜ್ ಚೊಕ್ಕವಾಗಿ ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಮೋಡಿ ಮಾಡುತ್ತಿದೆ. ಕೆಲವು ದೃಶ್ಯಗಳು ರೋಮಾಂಚನ ಉಂಟುಮಾಡುವಂತಿದ್ದು ಸುಧಾಕರ್ ಛಾಯಾಗ್ರಹಣ ಚಿತ್ರಕ್ಕೆ ಜೀವಂತಿಕೆ ನೀಡಿದೆ. ಆಕ್ಷನ್ ಸೀನ್ ಗಳು ಚಿತ್ರದ ಬಹುದೊಡ್ಡ ಆಕರ್ಷಣೆ. ದರ್ಶನ್ ಸಿನಿಮಾಗಳಲ್ಲಿ ಮಾಸ್ ಡೈಲಾಗ್ ಗಳು ರಾರಾಜಿಸುವುದು ಸಹಜ. ಈ ಚಿತ್ರದಲ್ಲಿ ಡೈಲಾಗ್ ಗಳು ಮಾತ್ರವಲ್ಲದೇ ಅರ್ಥಪೂರ್ಣ ಸಂಭಾಷಣೆಗಳು ಇಷ್ಟವಾಗುತ್ತವೆ.

 

ಒಟ್ಟಿನಲ್ಲಿ ಚಿತ್ರ ರಸಿಕರಿಗೆ ರಸದೌತಣ ಖಂಡಿತಾ. ಕೊರೊನಾ ಭೀತಿಯ ನಡುವೆಯೂ ಚಿತ್ರ ಭರ್ಜರಿ ಆರಂಭ ಕಂಡಿದ್ದು, ತೆಲುಗಲ್ಲೂ ದೂಳೆಬ್ಬಿಸುತ್ತಿದೆ. ಬಹುದಿನಗಳ ನಂತರ ಚಾಲೆಂಜಿಂಗ್ ಸ್ಟಾರ್ ಚಿತ್ರವೊಂದು ತೆರೆಕಂಡಿದ್ದು ಅಭಿಮಾನಿ ಬಳಗ ಹುಚ್ಚೆದ್ದು ಸಂಭ್ರಮಿಸುತ್ತಿದೆ. ಬಾಕ್ಸ್ ಆಫೀಸ್ ಧೂಳಿಪಟ ಮಾಡುವ ಮೂಲಕ ಮೊದಲ ದಿನವೇ 20ಕೋಟಿಗೂ ಅಧಿಕ ಕಲೆಕ್ಷನ್ ಬಾಚಿಕೊಳ್ಳುವ ಮೂಲಕ ಹಳೆಯ ದಾಖಲೆಗಳನ್ನೆಲ್ಲಾ ಪುಡಿಗಟ್ಟುತ್ತಾ ದಾಪುಗಾಲಿಟ್ಟಿದೆ. ಒಟ್ಟಾರೆಯಾಗಿ ಮತ್ತೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಚಿತ್ರ ಯಶಸ್ವಿಯಾಗಿದೆ.  ಕನ್ನಡ ಚಿತ್ರರಂಗದ ಪಾಲಿಗಂತೂ ಇದು ಬಹುದೊಡ್ಡ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಕೊರೋನ ಸಂಕಷ್ಟದ ನಡುವೆಯೂ ವರ್ಷಾರಂಭದಲ್ಲಿ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ರಾಬರ್ಟ್ ಓಟ ಇದೇ ವೇಗದಲ್ಲಿ ಮುಂದುವರಿದಲ್ಲಿ ಹೊಸ ಮೈಲಿಗಲ್ಲುಗಳನ್ನ ಸ್ಥಾಪಿಸುವುದರಲ್ಲಿ ಅನುಮಾನವಿಲ್ಲ.

Desk

Recent Posts

ಹಾಸ್ಟೆಲ್‌ ಯುವತಿಯರ ಬೆತ್ತಲೆ ವಿಡಿಯೊಗಳನ್ನು ಬಾಯ್‌ಫ್ರೆಂಡ್‌ಗೆ ಕಳುಹಿಸಿದ ಯುವತಿ!

ಮಹಾರಾಷ್ಟ್ರದ ಪುಣೆಯಲ್ಲಿರುವ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಪುಣೆಯ (COEP) ಹಾಸ್ಟೆಲ್‌ನಲ್ಲಿ ಯುವತಿಯೊಬ್ಬಳು ಮಾಡಿದ ಭಾನಗಡಿ ಈಗ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿನಿಯರು…

15 mins ago

ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ನಿಧನ

ಬೆಳ್ತಂಗಡಿಯ ಬಡವರ ಬಂಧು, ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿರುತ್ತಾರೆ. ಗುರುವಾರ ಮುಂಜಾನೆ…

38 mins ago

ಇಂದು ಎಸ್​ಎಸ್​ಎಲ್​​ಸಿ ಫಲಿತಾಂಶ : ಎಷ್ಟು ಗಂಟೆಗೆ? ಎಲ್ಲಿ ನೋಡಬಹುದು?

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶಬೆಳಗ್ಗೆ 10.30ಕ್ಕೆ ಪ್ರಕಟವಾಗಲಿದೆ. ರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುದ್ದಿಗೋಷ್ಠಿ…

50 mins ago

ಡಾ. ಲಕ್ಷ್ಮಣ ಪ್ರಭು ಅವರಿಗೆ ಪ್ರಸಿಡೆಂಟ್‌ ಅವಾರ್ಡ್‌

ನಗರದ ಕೆಎಂಸಿಯ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ಜಿ ಲಕ್ಷ್ಮಣ ಪ್ರಭು ಅವರಿಗೆ ದಿಲ್ಲಿಯ ರಾಷ್ಟ್ರೀಯ ವೈದ್ಯಕೀಯ…

1 hour ago

ಲಕ್ನೋ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 10 ವಿಕೆಟ್​ಗಳ ಭರ್ಜರಿ ಜಯ

ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್‌ ತಂಡ…

2 hours ago

ಇಂದು ಕೊಡಗು,ಚಿಕ್ಕಮಗಳೂರು ಸೇರಿ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

ರಾಜ್ಯದ ಕೊಡಗು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮೇ 9ರಂದು ಬಿರುಗಾಳಿಯೊಂದಿಗೆ ಗಾಳಿಯೊಂದಿಗೆ ಗುಡುಗು ಸಹಿತ ಭಾರಿ…

2 hours ago