Categories: ಮನರಂಜನೆ

ರಚಿತಾ ರಾಮ್ ಹೇಳ್ತಾರೆ ಜೆಡಿಎಸ್ ಗೆ ವೋಟ್ ಮಾಡ್ಬೇಕಂತೆ!

ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿನಿಮಾ ತಾರೆಯರು ರಾಜಕೀಯ ಪ್ರಚಾರಕ್ಕೆ ಇಳಿದು ಬಿಡುತ್ತಾರೆ. ಕೆಲವರು ರೋಡ್ ಶೋ ಮಾಡಿ ಪ್ರಚಾರ ಕೈಗೊಂಡರೆ ಇನ್ನು ಕೆಲವರು ಫೇಸ್ ಬುಕ್, ಟ್ವಿಟ್ಟರ್ ಅಂತ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮಿಷ್ಟದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಿಲ್ಲುತ್ತಾರೆ.

ಇದೀಗ ನಟಿ ರಚಿತಾ ರಾಮ್ ಅವರು ಜೆಡಿಎಸ್ ಪರವಾಗಿ ಮತ ಯಾಚನೆ ಆರಂಭಿಸಿದ್ದು, ವಿಡಿಯೋ ಮಾಡುವ ಮೂಲಕ ಜೆಡಿಎಸ್ ಪರವಾಗಿ ಮತಯಾಚನೆ ಮಾಡಿದ್ದಾರೆ.

‘ಮೇ 12ಕ್ಕೆ ನಮ್ಮ ರಾಜ್ಯದ ಚುನಾವಣೆ ಘೋಷಣೆ ಆಗಿದೆ. ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಮತ್ತು ರೈತರ ಪರ ಹೋರಾಡುವಂತಹ ಒಬ್ಬ ಒಳ್ಳೆಯ ನಾಯಕನ ಅವಶ್ಯಕತೆ ನಮ್ಮ ರಾಜ್ಯಕ್ಕಿದೆ. ಹಾಗಾಗಿ ಎಲ್ಲರೂ ಹೋಗಿ ನಿಮ್ಮ ಮತವನ್ನು ಜವಾಬ್ದಾರಿಯಿಂದ ಚಲಾಯಿಸಿ’.

‘ಇವರಿಗೆ ಸಿಕ್ಕ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಬಹಳಷ್ಟು ಯಶಸ್ವಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ರೈತರ ಪರ ಬೆಂಬಲಕ್ಕೆ ನಿಂತು ಹಾಗೆ ಅವರ ಪರವಾಗಿ ಒಳ್ಳೆ ಯೋಜನೆಗಳನ್ನು ಅಳವಡಿಸಿ ಯಶಸ್ವಿಯಾದ ಏಕೈಕ ನಾಯಕರು ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕ ಜೆ.ಡಿ.ಎಸ್ ರಾಜ್ಯಾಧ್ಯಕ್ಷರಾದ ಶ್ರೀಯುತ ಹೆಚ್.ಡಿ.ಕುಮಾರಣ್ಣನವರು’. ‘ರಾಜ್ಯದ ಅಭಿವೃದ್ಧಿಗಾಗಿ ಮತ್ತು ನಮ್ಮ ಕರ್ನಾಟಕದ ಭವಿಷ್ಯಕ್ಕಾಗಿ ಜೆಡಿಎಸ್ ಪಕ್ಷಕ್ಕೆ ಮತವನ್ನು ಹಾಕಿ ಅಧಿಕಾರಕ್ಕೆ ತನ್ನಿ’. ಎಂದು ಡಿಂಪಲ್ ಕ್ವೀನ್ ರಚ್ಚು ಕಳಕಳಿಯಿಂದ ಕೇಳಿಕೊಂಡಿದ್ದಾರೆ.

ನಟಿ ರಚಿತಾ ರಾಮ್ ಇದೇ ಮೊದಲ ಬಾರಿಗೆ ರಾಜಕೀಯ ಪಕ್ಷದ ಪರವಾಗಿ ಮಾತನಾಡಿದ್ದು ಅವರ ಅಭಿಮಾನಿಗಳಲ್ಲಿ ಆಶ್ಚರ್ಯ ತರಿಸಿದ್ದಂತು ಸುಳ್ಳಲ್ಲ.

Desk

Recent Posts

ಅರ್ಹತೆ ಇಲ್ಲದಿದ್ದರೂ ಕಾಮಗಾರಿ ಗುತ್ತಿಗೆ: ಬಸವರಾಜ ಜಾಬಶೆಟ್ಟಿ ಆರೋಪ

'ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಅವರ ಸೋದರ ಸಂಬಂಧಿ ಜಗದೀಶ ಖೂಬಾ ಅವರಿಗೆ…

28 seconds ago

ಜಾನುವಾರುಗಳಿಗೆ ಮೇವು ನೀಡಲು ಸರಕಾರಕ್ಕೆ ಆಗ್ರಹ

ಪ್ರತಿದಿನ ಜಾನುವಾರುಗಳಿಗೆ 6 ಕೆ.ಜಿ ಒಣಮೇವಿನ ಅವಶ್ಯಕತೆ ಇದೆ ಆದರೆ ಸರಕಾರ ಹಸಿರು ಮೇವಿನ ಬೀಜ ನೀಡಿದ್ದೇವೆ ಎಂದು ಹೇಳಿ…

2 mins ago

ದ.ಕ ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ : ಡಾ.ಎಚ್.ಆರ್.ತಿಮ್ಮಯ್ಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ 6 ಬೆಡ್, ಪ್ರತಿ…

11 mins ago

ರಾಜ್ಯದಲ್ಲಿ ನಾಳೆ, ನಾಡಿದ್ದು ಗುಡುಗು ಸಹಿತ ವರುಣಾರ್ಭಟ

ಎರಡು ದಿನದ ಹಿಂದೆ ಸಿಲಿಕಾನ್ ಸಿಟಿಗೆ ಮಳೆರಾಯ ತಂಪೆರೆದು ಹೋಗಿದ್ದಾನೆ. ಸದ್ಯ ಇದರ ಬೆನ್ನಲ್ಲೇ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ…

18 mins ago

ನಿಜಶರಣೆಯ ಮಾದರಿ ಬದುಕು: ಎಡೆಯೂರು ಶ್ರೀಗಳು

ಗುರು ಲಿಂಗ ಜಂಗಮರಲ್ಲಿ ಅನನ್ಯ ಭಕ್ತಿ ಹೊಂದಿದ್ದ ನಿಜಶರಣೆ ಹೇಮರಡ್ಡಿ ಮಲ್ಲಮ್ಮ, ಮಾನವೀಯ ಮೌಲ್ಯಗಳನ್ನು ಬೆಳಗಿಸಿದ ಮಾತೆ ಎಂದು ಎಡೆಯೂರು…

23 mins ago

ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಗ್ರಾಮಸ್ಥರ ಒತ್ತಾಯ

ಗ್ರಾಮದಲ್ಲಿ ಶಾಂತಿಯುತ ವಾತಾವರಣ ಕದಡುವ ಮೂಲಕ ಗ್ರಾಮಸ್ಥರ ನೆಮ್ಮದಿಗೆ ಧಕ್ಕೆ ತಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಿ.ಕಾರೇಹಳ್ಳಿ…

25 mins ago