ಮೋಹನ್ಲಾಲ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣಹಚ್ಚಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ‘ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ’ ಚಿತ್ರದ ನೂತನ ಟೀಸರ್ ಬಿಡುಗಡೆಯಾಗಿದೆ.
ಮೋಹನ್ ಲಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಟೀಸರ್ಅನ್ನು ಹಂಚಿಕೊಂಡಿದ್ದು, ಅದರ ಅದ್ದೂರಿ ದೃಶ್ಯ ವೈಭವಕ್ಕೆ ಅಭಿಮಾನಿಗಳು ಮಾರುಹೋಗಿದ್ದಾರೆ.
Here comes something you've been waiting for!#MarakkarLionoftheArabianSea Official Teaser 1https://t.co/MPS6AIfov1#MarakkarArabikadalinteSimham#MarakkarFromDec2 #MarakkarTeaser@priyadarshandir @antonypbvr @aashirvadcine@SunielVShetty @sabucyril @DOP_Tirru
— Mohanlal (@Mohanlal) November 24, 2021
ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿರುವ ಈ ಚಿತ್ರ ಡಿಸೆಂಬರ್ 2ರಂದು ದೇಶದೆಲ್ಲೆಡೆ ಬಿಡುಗಡೆಯಾಗಲಿದೆ. ಟೀಸರ್ನಲ್ಲಿ ಬ್ರಿಟೀಷರ ವಿರುದ್ಧದ ಹೋರಾಟದ ಅದ್ದೂರಿ ದೃಶ್ಯಗಳಿವೆ.
ಈ ಚಿತ್ರ ಕಳೆದ ಮಾರ್ಚ್ನಲ್ಲಿಯೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಯಿತು.
ಈ ಕುರಿತು ಕೇರಳ ಸರ್ಕಾರದ ಸಚಿವರು ಚಿತ್ರತಂಡದೊಂದಿಗೆ ಮಾತುಕತೆ ನಡೆಸಿದರು. ಅಂತಿಮವಾಗಿ ಚಿತ್ರತಂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಒಪ್ಪಿಕೊಂಡಿತು. ಇದೀಗ ಡಿಸೆಂಬರ್ 2ಕ್ಕೆ ಚಿತ್ರ ತೆರೆಕಾಣಲಿದೆ.