Categories: ಮನರಂಜನೆ

ಬಿಟಿಎಸ್ ನ ಅಪ್ಪಟ ಅಭಿಮಾನಿ ಕನ್ನಡತಿ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ಎಂದೇ ದೇಶದೆಲ್ಲೆಡೆ ಫೇಮಸ್ ಆಗಿರುವ ಕನ್ನಡತಿ ರಶ್ಮಿಕಾ ಮಂದಣ್ಣ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ರಶ್ಮಿಕಾ ಸಹ ಅಷ್ಟೇ, ತಮ್ಮ ಅಭಿಮಾನಿಗಳ ಜೊತೆ ಟಚ್ ನಲ್ಲಿರಲು ಆಗಾಗ‌ ಇನ್ಸ್ಟಾಗ್ರಾಮ್ ಲೈವ್ ಹಾಗೂ ಪ್ರಶ್ನೋತ್ತರ ಸೆಷನ್ ಗಳನ್ನ ನಡೆಸುತ್ತಿರುತ್ತಾರೆ. ಇಂತದ್ದೆ ಒಂದು ಆಸ್ಕ್ ಮೀ ಎನಿಥಿಂಗ್ ಪ್ರಶ್ನೋತ್ತರ ಸೆಷನ್ ನಲ್ಲಿ ರಶ್ಮಿಕಾ ಕೆ-ಪಾಪ್ ಅನ್ನು ಅಕ್ಷರಶಃ ಆಳುತ್ತಿರುವ ಬಿಟಿಎಸ್ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆಯು ಬಿಟಿಎಸ್ ತನ್ನ ಫೇವರಿಟ್ ಮ್ಯೂಸಿಕ್ ಬ್ಯಾಂಡ್ ಎಂದು ಹಲಬಾರು ಬಾರಿ ಹೇಳಿಕೊಂಡಿರುವ ಮಂದಣ್ಣ ಮತ್ತೊಮ್ಮೆ ತಮ್ಮ ಬಿಟಿಎಸ್ ಅಭಿಮಾನಿ ಎಂದು ತೋರಿಸಿದ್ದಾರೆ. ನೀವು ಬಿಟಿಎಸ್ ಹಾಡುಗಳನ್ನ ಕೇಳುತ್ತಿರಾ, ಆ ಹಾಡಿಗೆ ಕುಣಿಯುತ್ತೀರಾ ಎಂದ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಹೌದು ಬಿಟಿಎಸ್ ಹಾಡುಗಳನ್ನ ಕೇಳುತ್ತೇನೆ, ಅವರ ಹಾಡುಗಳಿಗೆ ಕುಣಿಯುತ್ತೇನೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ. ಪುಷ್ಪಾ ಚಿತ್ರದ ಪ್ರಮೋಷನ್ ವೇಳೆಯು ರಶ್ಮಿಕಾ ಬಿಟಿಎಸ್ ಗ್ರೂಪ್ ನ ಐಕಾನಿಕ್ ಪೋಸ್ ಗಳನ್ನ ರಿಕ್ರಿಯೇಟ್ ಮಾಡಿದ್ದರು.

ರಶ್ಮಿಕಾ ಮಂದಣ್ಣ ಮಾತ್ರವಲ್ಲ ಭಾರತದ ಅನೇಕ ಸೂಪರ್ ಸ್ಟಾರ್ ಗಳು ಬಿಟಿಎಸ್ ಹುಡುಗರ ಅಪ್ಪಟ ಅಭಿಮಾನಿಗಳು. ಆಲಿಯಾ ಭಟ್, ದಿಶಾ ಪಠಾಣಿ, ಟೈಗರ್ ಶ್ರಾಫ್, ದಿಲ್ಜೀತ್ ದೊಸಾಂಜ್ ಮತ್ತು ಗೌಹಾರ್ ಖಾನ್ ಸೇರಿದಂತೆ ಹಲವರು ತಮ್ಮ ಇಂಟರ್ವ್ಯೂಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

Gayathri SG

Recent Posts

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

3 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

13 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

34 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

58 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

1 hour ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

2 hours ago