ನಟ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯಲ್ಲಿ ಮೂಡಿಬರುತ್ತಿರುವ ಚಿತ್ರ ರಾಧೆ ಶ್ಯಾಮ್. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೊಂದಿದ್ದ ಅಭಿಮಾನಿಗಳಿಗೆ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.
ಜ.14ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ತಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ರಾಧೆ ಶ್ಯಾಮ್ ತೆರೆ ಕಾಣಲಿದೆ.
ಬಿಡುಗಡೆಯಾದ ಟ್ರೇಲರ್ ನಲ್ಲ ಪ್ರೀತಿ- ಪ್ರೇಮದ ಬಗ್ಗೆ ಹೆಚ್ಚು ಹೈ ಲೈಟ್ ಮಾಡಲಾಗಿದೆ. ನಟ ಪ್ರಭಾಸ್ ಈ ಚಿತ್ರದಲ್ಲಿ ವಿಕ್ರಮಾದಿತ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಹಡಗು ಮುಳುಗುವ ದೃಶ್ಯಗಳು, ಲವರ್ ಭಾಯ್ ನಂತೆ ಕಾಣುವ ಸ್ಟ್ರಾಂಗ್ ಮ್ಯಾನ್ ಆಗಿ ವಿಕ್ರನಾದಿತ್ಯ ತೆರೆ ಮೇಲೆ ನಟಿಸಲಿದ್ದಾರೆ.