ಚಂಢೀಗಡ: ಕೆಂಪು ಕೋಟೆಯಲ್ಲಿ ಸಿಖ್ ಧರ್ಮದ ಧ್ವಜ ಹಾರಿಸಿದ ಪ್ರತಿಭಟನಾಕಾರರೊಂದಿಗಿದ್ದ ನಟ ದೀಪ್ ಸಿಧು ಅವರೊಂದಿಗೆ ನನಗೆ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ಸ್ಪಷ್ಟಪಡಿಸಿದರು.
ದೀಪ್ ಸಿಧು ಹಾಗೂ ನನಗೆ ಯಾವುದೇ ಸಂಬಂಧವಿಲ್ಲವೆಂದು ಡಿಸೆಂಬರ್ 6ರಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದೇನೆ ಎಂದು ಡಿಯೋಲ್ ಅವರು ಟ್ವೀಟ್ ಮಾಡಿರುವರು.
ಕೆಂಪು ಕೋಟೆಯಲ್ಲಿ ನಡೆದಿರುವಂತಹ ಘಟನೆಗಳು ತುಂಬಾ ಬೇಸರ ಮೂಡಿಸಿದೆ ಎಂದು ಅವರು ತಿಳಿಸಿದರು.
ಪೊಲೀಸ್ ಬ್ಯಾರಿಕೇಡ್ ಗಳನ್ನು ಕಿತ್ತೊಗೆದು ಪ್ರತಿಭಟನಾಕಾರರು ಪೊಲೀಸರೊಂದಿಗ ಘರ್ಷಣೆ ನಡೆಸಿದ್ದರು.