ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅಭಿನಯಿಸಿರುವ ಶ್ಯಾಮ್ ಸಿಂಗ ರಾಯ್ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ.
ನಿರ್ದೇಶಕ ರಾಹುಲ್ ಸಂಕ್ರಿತ್ಯಾನ್ ನಿರ್ದೇಶನದ ಚಿತ್ರದಲ್ಲಿ ಸಾಯಿ ಪಲ್ಲವಿ ಜೊತೆಗೆ ನಟ ನಾನಿ ಹಾಗೂ ಕೃತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಕೊಲ್ಕತ್ತಾದಲ್ಲಿನ ದೇವದಾಸಿ ಪದ್ದತಿ ವಿರುದ್ಧ ಜನರ ಹೋರಾಡಿದ ಬಗ್ಗೆ ಈ ಚಿತ್ರ ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಜಿಂಗಾ ಸತ್ಯದೇವ್ ಕಥೆ ಬರೆದಿದ್ದು, ನಿಹಾರಿಕಾ ಎಂಟರ್ಟ್ಐನ್ ಮೆಂಟ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಬೊಯನಪಳ್ಳಿ ಈ ಚಿತ್ರಕ್ಕೆ ಹೂಡಿಕೆ ಮಾಡಿದ್ದಾರೆ.
ಈ ಸಿನಿಮಾ ಡಿ.24ರಂದು ರಿಲೀಸ್ ಗೆ ಸಿದ್ಧವಾಗಿದ್ದು, ಚಿತ್ರ ನಾಲ್ಕು ಭಾಷೆಗಳನ್ನು ನಿರ್ಮಾಣವಾಗಲಿದ್ದು, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.