ನಗ್ನವಾಗಿ ಆಡಿಶನ್‌ ಕೊಡಲು ಹೇಳಿದ್ದರೆ ರಾಜ್‌ ಕುಂದ್ರಾ ?: ನಟಿಯ ಆರೋಪ

ಮುಂಬೈ : ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚಿಕೆಯ ಆರೋಪದ ಮೇಲೆ ಬಂಧಿಸಿದ ಬಂಧನದ ಬೆನ್ನಲ್ಲೇ ನಟಿ, ರೂಪದರ್ಶಿ ಸಾಗರಿಕಾ ಶೋನಾ ನೀಡಿರುವ ಸಂದರ್ಶನವೊಂದು ವೈರಲ್ ಆಗಿದೆ. ಅದರಲ್ಲಿ ಸಾಗರಿಕಾ ಅವರು ತಾವು ರಾಜ್ ಕುಂದ್ರಾ ಅವರಿಗೆ ಸೇರಿದ ನಿರ್ಮಾಣ ಸಂಸ್ಥೆಗೆ ಆಡಿಶನ್ ಕೊಡುವಾಗ ರಾಜ್ ನಗ್ನವಾಗಿ ಕಾಣಿಸಿಕೊಳ್ಳಲು ಹೇಳಿದ್ದರು ಎಂದು ಆರೋಪಿಸಿದ್ದಾರೆ. ಪ್ರಸ್ತುತ ರಾಜ್ ಕುಂದ್ರಾ ಮೇಲೆ ಹಲವು ನಟಿಯರು ಆರೋಪ ಮಾಡಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.
ವಿಡಿಯೊದಲ್ಲಿ ಸಾಗರಿಕಾ ಶೋನಾ ಅವರು ತಮಗಾದ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ನಾನೊಬ್ಬ ರೂಪದರ್ಶಿ ಮತ್ತು ನಟಿ. ಈ ಕ್ಷೇತ್ರದಲ್ಲಿ ಮೂರು- ನಾಲ್ಕು ವರ್ಷ ಕೆಲಸ ಮಾಡಿದ್ದೇನೆ. ಆದರೆ 2020ರ ಆಗಸ್ಟ್​ನಲ್ಲಿ ನನಗಾದ ಕೆಲವು ಕಹಿ ಅನುಭವಗಳನ್ನು ಹೇಳಿಕೊಳ್ಳಲೇಬೇಕು. ಲಾಕ್​ಡೌನ್ ಸಂದರ್ಭದಲ್ಲಿ (ಮೊದಲ ಲಾಕ್​ಡೌನ್) ಉಮೇಶ್ ಕಾಮತ್ ಅವರಿಂದ ಒಂದು ಕರೆ ಬಂದಿತು. ಅವರು ರಾಜ್ ಕುಂದ್ರಾ ನಿರ್ಮಾಣದ ವೆಬ್​ ಸಿರೀಸ್​ನಲ್ಲಿ ಪಾತ್ರವೊಂದನ್ನು ಮಾಡುವಂತೆ ಆಹ್ವಾನ ನೀಡಿದರು. ನಾನಾಗ ರಾಜ್ ಕುಂದ್ರಾ ಯಾರೆಂದು ಕೇಳಿದ್ದಕ್ಕೆ- ಶಿಲ್ಪಾ ಶೆ್ಟ್ಟಿ ಪತಿ ಎಂದು ಉಮೇಶ್ ಹೇಳಿದ್ದರು.”“ಒಂದು ವೇಳೆ ನೀವು ಈ ಆಹ್ವಾನ ಒಪ್ಪಿದರೆ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಹೋಗುವಿರಿ ಎಂಬ ಭರವಸೆಯನ್ನೂ ನೀಡಿದ್ದರು. ಆದ್ದರಿಂದಲೇ ಆಡಿಶನ್​ಗೆ ಒಪ್ಪಿಕೊಂಡೆ. ಆದರೆ ಕೋವಿಡ್ ಕಾರಣದಿಂದ ಆಡಿಶನ್ ಹೇಗೆ ಕೊಡುವುದು ಎಂದು ಕೇಳಿದಾಗ, ವಿಡಿಯೊ ಕಾಲ್ ಮುಖಾಂತರ ಕೊಡಬಹುದು ಎಂದರು. ಯಾವಾಗ ನಾನು ವಿಡಿಯೊ ಕಾಲ್​ನಲ್ಲಿ ಜಾಯ್ನ್ ಆದೆನೋ ಆಗ ಅವರು ನಗ್ನವಾಗಿ ಆಡಿಶನ್ ನೀಡಲು ಹೇಳಿದರು. ನನಗೆ ಶಾಕ್ ಆಗಿ, ಖಡಾಖಂಡಿತವಾಗಿ ನಿರಾಕರಿಸಿದೆ. ವಿಡಿಯೊ ಕಾಲ್​ನಲ್ಲಿ ಮೂವರಿದ್ದರು. ಅದರಲ್ಲಿ ಮುಖವನ್ನು ಮುಚ್ಚಿಕೊಂಡಿದ್ದ ಒಬ್ಬರು ರಾಜ್ ಕುಂದ್ರಾ ಎಂಬ ಅನುಮಾನ ನನಗಿದೆ. ಒಂದು ವೇಳೆ ಅವರು ಇಂತಹ ದಂಧೆಯಲ್ಲಿ ತೊಡಗಿಸಿಕೊಂಡಿರುವುದೇ ಹೌದಾದರೆ, ಅವರನ್ನು ಬಂಧಿಸಬೇಕು. ಆಗ ಇನ್ನಷ್ಟು ಮಾಹಿತಿಗಳು ದೊರೆಯಬಹುದು” ಎಂದು ಸಾಗರಿಕಾ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು.
ಸಾಗರಿಕಾ ಹೆಸರಿಸಿರುವ ಉಮೇಶ್ ಕಾಮತ್ ಅವರನ್ನು ಫೆಬ್ರವರಿ 9ರಂದು ಪೊಲೀಸರು ಬಂಧಿಸಿದ್ದರು. ಅವರು ರಾಜ್ ಕುಂದ್ರಾ ಅವರ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದರು. ಅಶ್ಲೀಲ ದೃಶ್ಯಗಳ ತಯಾರಿಕೆ ಮತ್ತು ಹಂಚಿಕೆಯ ಆರೋಪದಲ್ಲಿಯೇ ಉಮೇಶ್ ಕಾಮತ್ ಬಂಧನವಾಗಿತ್ತು. ರಾಜ್‌ ಕುಂದ್ರಾ ವಿರುದ್ದ ಮತ್ತಷ್ಟಿ ನಟಿಯರು ಇದೇ ರೀತಿಯ ಆರೋಪಗಳನ್ನು ಮಾಡಿದ್ದಾರೆ.

Indresh KC

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

4 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

5 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

5 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

6 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

7 hours ago