ಕಾಲು ಜಾರಿ ಬಿದ್ದು ಗಾಯಗೊಂಡ ಹಿರಿಯ ನಟಿ ಲೀಲಾವತಿ

ಬೆಂಗಳೂರು : ಹಿರಿಯ ನಟಿ ಎಸ್. ಲಿಲಾವತಿ  ಕಾಲು ಜಾರಿಬಿದ್ದು ಸೊಂಟ ಮತ್ತು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಸೋಲದೇವನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ತಕ್ಷಣ ಅವರನ್ನು ನೆಲಮಂಗಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪುತ್ರ ವಿನೋದ್ ರಾಜ್ ಜೊತೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದ ಲೀಲಾವತಿ ಅವರಿಗೆ ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಿನೋದ್ ರಾಜ್ ಬಚ್ಚಲು ಮನೆಯಲ್ಲಿ ಬಿದ್ದ ತಕ್ಷಣ ಲೀಲಾವತಿ ಅವರಿಗೆ ಬಾಗಿಲು ತೆಗೆಯಲು ಸಾಧ್ಯವಾಗಿಲ್ಲ. ಸುಮಾರು ಒಂದು ಅರ್ಧ-ಮುಕ್ಕಾಲು ಗಂಟೆ ಒದ್ದಾಡಿದ್ದಾರೆ. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲೂ ಸಾಧ್ಯವಾಗಿಲ್ಲ. ಬಚ್ಚಲ ಮನೆಯಲ್ಲೇ ನೆರಳಾಡಿ ದ್ದಾರೆ. ಬಳಿಕ ನಿಧಾನವಾಗಿ ಬಾಗಿಲು ತೆಗೆದು ಹೊರಬಂದಿದ್ದಾರೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
Raksha Deshpande

Recent Posts

ಎರಡು ಕುಟುಂಬಗಳ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ : ಮಗು ಬಲಿ

ಹಣಕಾಸಿನ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಜಗಳ ನಡೆದು ಮಗುವೊಂದು ಬಲಿಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ…

11 mins ago

ಅಬಕಾರಿ ನೀತಿ ಪ್ರಕರಣದಲ್ಲಿ ಇಡಿ ಅತ್ಯಂತ ಉತ್ತಮವಾಗಿ ವರ್ತಿಸಿದೆ : ಕೇಜ್ರಿವಾಲ್

ಆಪಾದಿತ ಅಬಕಾರಿ ನೀತಿ ಹಗರಣದಿಂದ ಉಂಟಾದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) "ಅತ್ಯಂತ ಉನ್ನತ ರೀತಿಯಲ್ಲಿ" ವರ್ತಿಸಿದೆ…

12 mins ago

ಇಂತಹ ಸುಳ್ಳುಗಾರ ಪ್ರಧಾನಿಯನ್ನು ಮೊದಲ ಬಾರಿ ನೋಡುತ್ತಿದ್ದೇನೆ: ಪ್ರಯಾಂಕ ಗಾಂಧಿ

ಕಾಂಗ್ರೆಸ್‌ನ ಆಸ್ತಿ ಮರುಹಂಚಿಕೆ ವಿಚಾರವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿಯನ್ನು ಸುಳ್ಳುಗಾರನೆಂದು ಕರೆದಿರುವ ಪ್ರಯಾಂಕ ಗಾಂಧಿ ವಾದ್ರಾ, ತಾನು ಈ…

23 mins ago

ದುಡಿದ ಕಾರ್ಯಕರ್ತರಿಗೆ ಅಭಿನಂದನೆ, ಗೆಲ್ಲುವ ವಿಶ್ವಾಸ ಇದೆ: ಬಿಜೆಪಿ ಅಭ್ಯರ್ಥಿ ಕೋಟ

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಅಭ್ಯರ್ಥಿಯಾಗಿ ಎಲ್ಲಾ ಎಂಟು ಕ್ಷೇತ್ರಗಳಲ್ಲಿ ಓಡಾಡಿದ್ದು ಮತದಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕಾರ್ಯಕರ್ತರು…

38 mins ago

ಜಗತ್ತಿನ ಏಕೈಕ ಸುಳ್ಳು ಪ್ರಧಾನಿ ನರೇಂದ್ರ ಮೋದಿ -ಸಿ.ಎಮ್.ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. 19 ವರ್ಷದಲ್ಲಿ ಮಾರುಕಟ್ಟೆಯಲ್ಲಿ ಸುಳ್ಳು ಮಾರಿಕೊಂಡು ಹೊರಟಿದ್ದಾರೆ. ಅವರನ್ನು ನಂಬಿ…

42 mins ago

ಕಲಬುರಗಿ ಮಹಾನಗರ ಪಾಲಿಕೆ ಮಾಜಿ ಮೇಯರ್ ವಾಹನದಲ್ಲಿ 2 ಕೋಟಿ ರೂ.ಪತ್ತೆ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿರುವ ಇಲ್ಲಿನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಾರೊಂದರಲ್ಲಿ ಸಾಗಾಟ ಮಾಡುತ್ತಿದ್ದ 2…

55 mins ago