News Karnataka Kannada
Thursday, May 02 2024
ಮನರಂಜನೆ

ಏಳು ದಿನಗಳ ಅವಧಿಯಲ್ಲಿ ವಿಶ್ವಾದ್ಯಂತ ಸುಮಾರು 709 ಕೋಟಿ ರೂ ಬಾಚಿಕೊಂಡ ಆರ್​ಆರ್​ಆರ್​

They will ask if they have seen 'RRR': Brazilian President
Photo Credit :

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುಗ್ಗುತ್ತಿದೆ. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಸಿನಿಮಾಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಿಲೀಸ್ ಆದ ಒಂದು ವಾರದಲ್ಲೇ ಭರ್ಜರಿ ಗಳಿಕೆ ಮಾಡಿದೆ.

ಈ ಹಿಂದೆ 2015ರಲ್ಲಿ ರಿಲೀಸ್ ಆಗಿದ್ದ ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಒಟ್ಟು 650 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ದಾಖಲೆಯನ್ನು ಕೇವಲ ಏಳೇ ದಿನದಲ್ಲಿ ಪುಡಿಪುಡಿ ಮಾಡಿದೆ ‘ಆರ್​ಆರ್​ಆರ್​’. ಇದು ನಿರ್ದೇಶಕ ರಾಜಮೌಳಿ ಜನಪ್ರಿಯತೆ ಹಾಗೂ ಚಿತ್ರದ ಗಟ್ಟಿತನಕ್ಕೆ ಸಾಕ್ಷಿ ಎಂದು ಅಭಿಮಾನಿಗಳು ಸಂಭ್ರಮಿಸಿದ್ದಾರೆ.

‘ಆರ್​ಆರ್​ಆರ್​’ನ ಪಾತ್ರಗಳು ತೆಲುಗು ಮೂಲದ್ದಾದರೂ; ದೇಶಭಕ್ತಿಯ ಕತೆಯಾಗಿರುವುದರಿಂದ ಎಲ್ಲರಿಗೂ ಕನೆಕ್ಟ್ ಆಗಿದೆ. ಜತೆಗೆ ಕುಟುಂಬ ಸಮೇತ ನೋಡುವ ಸಿನಿಮಾವಾಗಿರುವುದರಿಂದ ಜನರು ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರ ವೀಕ್ಷಿಸುತ್ತಿದ್ದಾರೆ.

ಹಿಂದಿ ಅವತರಣಿಕೆಯಲ್ಲೂ ಚಿತ್ರವು ಕಲೆಕ್ಷನ್ ವಿಚಾರದಲ್ಲಿ ಹಲವು ದಾಖಲೆ ಬರೆದಿದೆ. ಈ ಮೂಲಕ ‘ಆರ್​ಆರ್​ಆರ್​’ ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ. ಏಳು ದಿನಗಳ ಅವಧಿಯಲ್ಲಿ ಆರ್​ಆರ್​ಆರ್​ ವಿಶ್ವಾದ್ಯಂತ ಸುಮಾರು 709 ಕೋಟಿ ರೂ ಬಾಚಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ ಬಾಕ್ಸಾಫೀಸ್ ತಜ್ಞರು.

ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಆರ್​ಆರ್​ಆರ್​’ ಮಾರ್ಚ್ 25ರಂದು ತೆರೆಗೆ ಬಂದಿತ್ತು. ಮೊದಲ ದಿನವೇ ಬರೋಬ್ಬರಿ 257 ಕೋಟಿ ರೂಗಳನ್ನು ಚಿತ್ರ ಬಾಚಿಕೊಂಡಿತ್ತು. ಕ್ರಮೇಣ ಚಿತ್ರದ ಗಳಿಕೆ ಇಳಿಕೆಯಾಗುತ್ತಾ ಬಂದರೂ ಕೂಡ, ಉತ್ತಮವಾಗಿಯೇ ಕಲೆಕ್ಷನ್ ಮಾಡುತ್ತಿದೆ.

ಇದೀಗ ಚಿತ್ರ ರಿಲೀಸ್ ಆಗಿ ವಾರ ಕಳೆದಿದ್ದು, ಗುರುವಾರದಂದು 37 ಕೋಟಿ ರೂ ಗಳಿಸುವ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ ₹ 709.36 ಕೋಟಿ ರೂಗೆ ತಲುಪಿದೆ. ಎರಡು ಅಥವಾ ಮೂರನೇ ವಾರದಲ್ಲಿ ಚಿತ್ರವು 1000 ಕೋಟಿ ಕ್ಲಬ್​ ಸೇರಬಹುದು ಎಂಬ ನಿರೀಕ್ಷೆಯನ್ನು ಹಲವರು ವ್ಯಕ್ತಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು