News Karnataka Kannada
Thursday, May 02 2024
ಮನರಂಜನೆ

ಎರಡು ಸಿನಿಮಾಗಳಿಗೆ ₹ 744 ಕೋಟಿ ಸಂಭಾವನೆ ಪಡೆದ ನಟ

Jemsbond 21082021
Photo Credit :

ಹಾಲಿವುಡ್: ಜೇಮ್ಸ್ ಬಾಂಡ್ ನಟ ಡೇನಿಯಲ್ ಕ್ರೇಗ್ ಮುಂದೆ ಬರಲಿರುವ ಎರಡು ಸಿನಿಮಾಗಳಿಗೆ ₹ 744 ಕೋಟಿ ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದಾರೆ.

2019ರಲ್ಲಿ ಬಿಡುಗಡೆಯಾಗಿದ್ದ ನೈವ್ಸ್ ಔಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಪ್ರೇಕ್ಷಕರಿಂದ ಮಾತ್ರವಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲಿ ಮುಖ್ಯವಾದ ಡಿಟೆಕ್ಟಿವ್ ಪಾತ್ರವನ್ನು ಡೇನಿಯಲ್ ಕ್ರೇಗ್ ನಿರ್ವಹಿಸಿದ್ದರು.

ವಿಭಿನ್ನ ಪ್ರಕಾರದ ಆ ಸಿನಿಮಾ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇದೀಗದೇ ಸಿನಿಮಾದ ಎರಡು ಅವತರಣಿಕೆಗಳು ತೆರೆಗೆ ಬರಲು ಸಿದ್ಧವಾಗಿವೆ. ಅವೇ ಎರಡು ಸಿನಿಮಾಗಳ ನಟನೆಗಾಗಿ ಡೇನಿಯಲ್ ಕ್ರೇಗ್ 744 ಕೋಟಿ. ಸಂಭಾವನೆ ಪಡೆದಿದ್ದಾರೆ.

ಇದುವರೆಗೂ ಯಾವ ದೊಡ್ಡ ದೊಡ್ಡ ಹಾಲಿವುಡ್ ಸ್ಟುಡಿಯೋಗಳೂ ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಟ್ಟ ಉದಾಹರಣೆಯಿಲ್ಲ. ಇದೀಗ ಡೇನಿಯಲ್ ಕ್ರೇಗ್ ಸಂಭಾವನೆ ಹೆಚ್ಚಳಕ್ಕೆ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಕ್ಕೆ ಬೇಡಿಕೆ ಕುದುರಿರುವುದೇ ಕಾರಣ. ಹಾಲಿವುಡ್ ಸಿನಿಮಾಗಳನ್ನು ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸದೇ ನೇರವಾಗಿ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂಥ ಒಟಿಟಿ ಮನರಂಜನಾ ಜಾಲತಾಣತಾಣಗಳಲ್ಲಿ ಬಿಡುಗಡೆ ಮಾಡುವ ಬೆಳವಣಿಗೆ ಕಂಡು ಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು