News Karnataka Kannada
Thursday, April 25 2024
ಮನರಂಜನೆ

ಸುಶಾಂತ್ ಗೆ ಡ್ರಗ್ಸ್ ಸೇವನೆಗೆ ಒತ್ತಾಯಿಸುತ್ತಿದ್ದ ರಿಯಾ ಚಕ್ರವರ್ತಿ!

Photo Credit :

ಸುಶಾಂತ್ ಗೆ ಡ್ರಗ್ಸ್ ಸೇವನೆಗೆ ಒತ್ತಾಯಿಸುತ್ತಿದ್ದ ರಿಯಾ ಚಕ್ರವರ್ತಿ!

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಚಾರಗಳು ಹೊರಗೆ ಬರುತ್ತಿದ್ದು, ನಟನ ಮನೆಯ ಸಿಬ್ಬಂದಿಯೊಬ್ಬರು ಸ್ಫೋಟಕ ಮಾಹಿತಿ ಹೊರಹಾಕಿರುವರು.

2020ರ ಜನವರಿ ತನಕ ಸುಶಾಂತ್ ಮನೆಯಲ್ಲಿ ಇವರು ಕೆಲಸ ಮಾಡಿರುವರು. ಇವರ ಪ್ರಕಾರ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಆತನ ಜೀವನಕ್ಕೆ ಬಂದ ಬಳಿಕ ಮಾದಕ ದ್ರವ್ಯ ಸೇವನೆಗೆ ಒತ್ತಾಯಿಸುತ್ತಿದ್ದರು ಎಂದು ಬಹಿರಂಗಪಡಿಸಿರುವರು.

ಸುಶಾಂತ್ ಗೆ ಯಾವುದೇ ಮಾದಕ ದ್ರವ್ಯದ ಚಟವಿರಲಿಲ್ಲ. ಕೇವಲ ಮದ್ಯಪಾನ ಮತ್ತು ಸಿಗರೇಟ್ ಸೇವನೆ ಮಾಡುತ್ತಿದ್ದರು. ಆದರೆ ರಿಯಾ ಅವರ ಜೀವನದಲ್ಲಿ ಬಂದ ಬಳಿಕ ಮಾದಕ ದ್ರವ್ಯ ಸೇವನೆ ಮಾಡುವಂತೆ ಆಕೆ ಒತ್ತಾಯಿಸುತ್ತಿದ್ದರು. ಇದರಿಂದ ಕೆಲವೊಮ್ಮೆ ಅವರು ಇದನ್ನು ಸೇವನೆ ಮಾಡುತ್ತಿದ್ದರು ಎಂದು ಮನೆಯ ಸಿಬ್ಬಂದಿ ತಿಳಿಸಿರುವರು.

ರಿಯಾ ಮತ್ತು ಸುಶಾಂತ್ ಚಿತ್ರೀಕರಣದ ವೇಳೆ ಭೇಟಿಯಾದ ಬಳಿಕ ಅವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಇದರ ಬಳಿಕ ಸುಶಾಂತ್ ಜೀವನ ಸಂಪೂರ್ಣವಾಗಿ ರಿಯಾ ಕೈಯಲ್ಲಿತ್ತು ಎಂದು ಅವರು ಮಾಹಿತಿ ನೀಡಿರುವರು.

ಈಗಾಗಲೇ ಮಾದಕ ದ್ರವ್ಯ ನಿಗ್ರಹ ಪಡೆ(ಎನ್ ಸಿಬಿ) ಯು ರಿಯಾ ಚಕ್ರವರ್ತಿ ವಿರುದ್ಧ ಕೇಸು ದಾಖಲಿಸಿಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು