News Karnataka Kannada
Monday, April 22 2024
Cricket
ಮನರಂಜನೆ

ಸುಶಾಂತ್‌ ಸಾವು: ಮಾಧ್ಯಮಗಳ ವಿಚಾರಣೆ ನಿಲ್ಲಿಸಲು ಹೈಕೋರ್ಟ್‌ಗೆ ಅರ್ಜಿ

Photo Credit :

ಸುಶಾಂತ್‌ ಸಾವು: ಮಾಧ್ಯಮಗಳ ವಿಚಾರಣೆ ನಿಲ್ಲಿಸಲು ಹೈಕೋರ್ಟ್‌ಗೆ ಅರ್ಜಿ

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಬಗ್ಗೆ ಸುದ್ದಿ ವಾಹಿನಿಗಳು ವಿಚಾರಣೆ ನಡೆಸುವುದನ್ನು ನಿಲ್ಲಿಸಲು ಸೂಚಿಸಬೇಕು ಎಂದು ಬಾಂಬೆ ಹೈಕೋರ್ಟ್‌ನಲ್ಲಿ ನೀಲೇಶ್ ನಲ್ವಾಕಾ ಮತ್ತು ಇಬ್ಬರು ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ.

ಸುದ್ದಿವಾಹಿನಿಗಳು ಸುಶಾಂತ್ ಪ್ರಕರಣದ ಬಗ್ಗೆ ಸುದ್ದಿ ಪ್ರಸಾರ ಮತ್ತು ತನಿಖೆ ಬಗ್ಗೆ ಸುದ್ದಿ ಮಾಡುವುದಕ್ಕೆ ಮಿತಿ ಇರಬೇಕು. ಸುದ್ದಿವಾಹಿನಿಗಳ ಈ ರೀತಿಯ ವಿಚಾರಣೆಯು ಸಿಬಿಐ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜೂನ್ 14ರಂದು ಸುಶಾಂತ್ ಆತ್ಮಹತ್ಯೆಯಿಂದ ಸಾವಿಗೀಡಾದ ನಂತರ ಹಲವಾರು ಸುದ್ದಿವಾಹಿನಿಗಳು ಈ ಪ್ರಕರಣದ ವಿಚಾರಣೆ ಮತ್ತು ಅದೇ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಟಿವಿ ಚಾನೆಲ್ ಮತ್ತು ಇತರ ಮಾಧ್ಯಮಗಳು ಈಗಾಗಲೇ ಆರೋಪಿಗೆ ಶಿಕ್ಷೆ ವಿಧಿಸುವ ಕಾರ್ಯಗಳನ್ನು ಮಾಡುತ್ತಿವೆ. ಈ ರೀತಿಯ ಸದೃಶ ತನಿಖೆಗಳು ಸುಪ್ರೀಂ ಕೋರ್ಟ್ ಆದೇಶ ಮತ್ತು ಕಾನೂನಿನ ವಿಧಿಯ ಉಲ್ಲಂಘನೆಯಾಗಿದೆ. ಸುಶಾಂತ್ ಪ್ರಕರಣದ ಬಗ್ಗೆ ವರದಿಗಾರಿಕೆ, ಚರ್ಚೆ ಮತ್ತು ಯಾವುದೇ ರೀತಿಯ ವಿಚಾರಣೆಗಳನ್ನು ನಡೆಸುವುದನ್ನು ಮಾಧ್ಯಮಗಳು ಮುಂದೂಡಲಿ. ಇದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಹಲವಾರು ಸುದ್ದಿವಾಹಿನಿಗಳ ವಿರುದ್ಧವೂ ಅರ್ಜಿದಾರರು ಮೊಕದ್ದಮೆ ಹೂಡಿದ್ದಾರೆ. ಕೆಲವು ಸುದ್ದಿವಾಹಿನಿಗಳ ವಿರುದ್ಧ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಅಪ್ಪ ದೂರು ನೀಡಿದ್ದು ಪ್ರಕರಣದ ವಿಚಾರಣೆಯನ್ನು ಸಿಬಿಐ ನಡೆಸುತ್ತಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು