News Karnataka Kannada
Thursday, April 25 2024
ಮನರಂಜನೆ

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆದ ಶಕ್ತಿಮಾನ್

Photo Credit :

ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಗರಂ ಆದ ಶಕ್ತಿಮಾನ್

ಮುಂಬೈ: ಶಕ್ತಿಮಾನ್’ ಮತ್ತು ‘ಮಹಾಭಾರತ’ ಧಾರಾವಾಹಿ ಮೂಲಕ ದೇಶದ ಗಮನ ಸೆಳೆದಿದ್ದ ನಟ ಮುಖೇಶ್ ಖನ್ನಾ ಸಾವಿನ ವದಂತಿ ವೈರಲ್ ಆಗಿದೆ. ಕೋವಿಡ್-19 ನಿಂದ ಮುಖೇಶ್ ಖನ್ನಾ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮುಖೇಶ್ ಸಾವಿನ ಪೋಸ್ಟರ್ ಗಳನ್ನು ನೋಡಿ ಅಭಿಮಾನಿಗಳು, ಸ್ನೇಹಿತರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ತನ್ನ ಸಾವಿನ ಸುದ್ದಿಯನ್ನು ತಾವೆ ನೋಡಿ ಶಾಕ್ ಆದ ಮುಖೇಶ್ ಖನ್ನಾ ನಾನಿನ್ನೂ ಬದುಕಿದ್ದೀನಿ ಎಂದು ವಿಡಿಯೋ ಮೂಲಕ ಫುಲ್ ಗರಂ ಆಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸಾವಿನ ವದಂತಿಗೆ ಸ್ಪಷ್ಟನ ನೀಡಿರುವ ಮುಖೇಶ್ ಖನ್ನಾ, ಯಾರೊಬ್ಬರ ಜೀವನದ ಬಗ್ಗೆಯೂ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಸಬೇಡಿ, ಮೊದಲು ಪರಿಶೀಲಿಸಿಕೊಳ್ಳಿ ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣವೇ ಹೊಣೆಯಾಗಲಿದೆ ಎಂದಿದ್ದಾರೆ.

‘ನಿಮ್ಮ ಆಶೀರ್ವಾದದಿಂದ ನಾನು ಸಂಪೂರ್ಣವಾಗಿ ಆರೋಗ್ಯವಾಗಿ, ಚೆನ್ನಾಗಿ ಇದ್ದೀನಿ. ನನಗೆ ಕೋವಿಡ್ -19 ಇಲ್ಲ. ನನ್ನನ್ನು ಯಾವುದೇ ಆಸ್ಪತ್ರೆಗೂ ದಾಖಲಿಸಿಲ್ಲ. ಈ ವದಂತಿಯನ್ನು ಯಾರು ಹಬ್ಬಿಸಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಇದರ ಉದ್ದೇಶವೇನು ಎನ್ನುವುದು ನನಗೆ ಗೊತ್ತಿಲ್ಲ. ಇಂಥ ಸುಳ್ಳು ಸುದ್ದಿಯಿಂದ ಜನರ ಭಾವನೆಯನ್ನು ನೋವಿಸಬೇಡಿ’ ಎಂದು ಹೇಳಿದ್ದಾರೆ.

‘ಇಂಥ ಮಾನಸಿಕ ಅಸ್ಥಿರವಾಗಿರುವ ಜನರಿಗೆ ಯಾವ ಚಿಕಿತ್ಸೆ ನೀಡಬೇಕು. ಅವರನ್ನು ಯಾರು ಶಿಕ್ಷಿಸುತ್ತಾರೆ. ಸಾಕು, ಈಗಲೇ ಜಾಸ್ತಿ ಆಗಿದೆ. ಇಂಥ ನಕಲಿ ಸುದ್ದಿಗಳನ್ನು ನಿಲ್ಲಿಸಿ’ ಕೋಪಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು