News Karnataka Kannada
Monday, April 22 2024
Cricket
ಮನರಂಜನೆ

ಲಾಕಪ್ ರಿಯಾಲಿಟಿ ಶೋನಲ್ಲಿ ಗೆದ್ದ ಮುನಾವರ್ ಫಾರೂಕಿ

Untitled 1
Photo Credit :

ಮಹಾರಾಷ್ಟ್ರ: ‘ಆಲ್ಟ್ ಬಾಲಾಜಿ’ ಹಾಗೂ ‘ಎಂಎಕ್ಸ್‌ ಪ್ಲೇಯರ್‌’ನಲ್ಲಿ ಪ್ರಸಾರವಾಗುತ್ತಿದ್ದ ಲಾಕಪ್ ರಿಯಾಲಿಟಿ ಶೋನಲ್ಲಿ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಅವರು ಜಯಶಾಲಿಯಾಗಿದ್ದಾರೆ. ಈ ಮೂಲಕ ಅವರು ₹25 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

ನಿನ್ನೆ ಸಂಜೆ ನಡೆದ ಫೈನಲ್‌ನಲ್ಲಿ ಶೋ ನಿರೂಪಕಿ ಕಂಗನಾ ರನೌಟ್ ಅವರು ವಿಜಯಶಾಲಿ ಹೆಸರು ಘೋಷಿಸಿದರು. ಫಾರೂಕಿ ಜೊತೆ ನಟಿ ಪಾಯಲ್ ರೋಹಟಗಿ ಅವರು ರನ್ನರ್ ಅಪ್ ಆಗಿದ್ದಾರೆ.

70 ದಿನ ನಡೆದ ಈ ಶೋ ನಲ್ಲಿ 20 ಸ್ಪರ್ಧಿಗಳು ಭಾಗವಹಿಸಿದ್ದರು. ಹೊಸತನದ ಟಾಸ್ಕ್‌ಗಳಿದ್ದಿದ್ದರಿಂದ ಈ ಶೋ ಸಾಕಷ್ಟು ಜನರ ಗಮನ ಸೆಳೆದಿತ್ತು. ಅಲ್ಲದೇ ಸ್ಪರ್ಧಿಗಳು ತಮ್ಮ ಜೀವನದ ಸತ್ಯ ಘಟನೆಗಳನ್ನು ಪ್ರೇಕ್ಷಕರ ಮುಂದೆ ಮುಕ್ತವಾಗಿ ಹೇಳಿಯೂ ಸುದ್ದಿಯಾಗಿದ್ದರು.

ನಟಿ ಕಂಗನಾ ಕೂಡ ಈ ಶೋನಲ್ಲಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮುಕ್ತವಾಗಿ ಹೇಳಿಕೊಂಡು ಗಮನ ಸೆಳೆದಿದ್ದರು.

ಸ್ಪರ್ಧಿಗಳು ವಿವಿಧ ಆರೋಪಗಳ ಮೇಲೆ ಜೈಲು ಸೇರಿ (ಕಾಲ್ಪನಿಕ) ಜೈಲು ಹಕ್ಕಿಗಳಾಗಿ ಹೇಗೆ ಹೊರ ಜಗತ್ತಿನ ಮನ ಗೆಲ್ಲುತ್ತಾರೆ ಎಂಬುದು ಲಾಕಪ್ ಶೋ ತಿರುಳಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು