News Karnataka Kannada
Saturday, April 13 2024
Cricket
ಮನರಂಜನೆ

ಮದುವೆಯಾಗಲು ನಿರಾಕರಿಸಿದ್ದಕ್ಕೆ ಹೆತ್ತವರಿಂದಲೇ ಹತನಾದ ಪುತ್ರ

Photo Credit :

ಮದುವೆಯಾಗಲು ನಿರಾಕರಿಸಿದ್ದಕ್ಕೆ ಹೆತ್ತವರಿಂದಲೇ ಹತನಾದ ಪುತ್ರ

ಟೆಹರಾನ್ : ಹಲವಾರು ವಿಷಯಕ್ಕೆ ಕೊಲೆಗಳು ನಡೆಯುವುದು ಸಹಜ. ಅದರಲ್ಲಿಯೂ ಗಂಡ-ಹೆಂಡತಿ ನಡುವಿನ ಮನಸ್ತಾಪ, ಆಸ್ತಿ ವಿಚಾರ, ಅಕ್ರಮ ಸಂಬಂಧ ಹೀಗೆ ಅನೇಕ ಉದ್ದೇಶ ಗಳಿಂದಾಗಿ ಕೊಲೆ ಪ್ರಕರಣಗಳು ನಡೆದಿದ್ದು ಕೇಳಿಬಂದಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆ ವಿಚಾರದ ಕುರಿತು ಕೊಲೆ ನಡೆದಿತ್ತು ಹೆತ್ತವರೇ ಮಗನನ್ನು ಕೊಂದಿದ್ದಾರೆ. 

 

ಹೌದು, ಪ್ರಾಯ 47 ವರ್ಷವಾದರೂ ಮಗ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪೋಷಕರು ಸಿಟ್ಟಿನ ಭರದಲ್ಲಿ ಮಗನ ಹತ್ಯೆ ಮಾಡಿದ್ದಾರೆ . ಚಿತ್ರನಿರ್ಮಾಪಕರಾಗಿ ಗುರುತಿಸಿಕೊಂಡಿದ್ದ ಬಾಬಕ್ ಕೋರಮದ್ದೀನ್ ಇದೀಗ ಪ್ರಾಣ ಕಳೆದುಕೊಂಡಿದ್ದಾರೆ .

 

 ಮದುವೆ ವಿಚಾರವಾಗಿ ಬಾಬಕ್ ಮನೆಯಲ್ಲಿ ದಿನ ನಿತ್ಯ ಜಗಳ ನಡೆಯುತ್ತಿತ್ತು . ಯಾಕೆ ಮದುವೆಯಾಗಲ್ಲ ಎಂದು ಅವರ ಪೋಷಕರು ಪ್ರಶ್ನಿಸುತ್ತಿದ್ದರಂತೆ . ಹೀಗೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ . ಮಗನನ್ನು ಕೊಂದಿರುವುದನ್ನು ಬಾಬಕ್ ಪೋಷಕರು ಒಪ್ಪಿಕೊಂಡಿದ್ದಾರೆ . ಬಾಬಕ್ ಅವರ ತಂದೆ ಮತ್ತು ತಾಯಿಯನ್ನು ಪ್ರಕರಣ ಸಂಬಂಧ ಬಂಧಿಸಲಾಗಿದ್ದು, ಮಗನ ದೇಹವನ್ನು ತುಂಡರಿಸಿ ಅದನ್ನು ಬಿಸಾಡಲು ಪೋಷಕರು ಯತ್ನ ನಡೆಸಿದ್ದರು ಎಂದು ಅವರ ವಿರುದ್ಧ ಆರೋಪಿಸಲಾಗಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು