News Karnataka Kannada
Wednesday, April 17 2024
Cricket
ಮನರಂಜನೆ

ಬಾಲಕಿಯ ಮೇಲೆ ಅತ್ಯಾಚಾರ ಆರೋಪ; ಹಿಂದಿ ಕಿರುತೆರೆ ನಟ ಪರ್ವ್ ವಿ. ಪುರಿ ಬಂಧನ

Photo Credit :

ಬಾಲಕಿಯ ಮೇಲೆ ಅತ್ಯಾಚಾರ ಆರೋಪ;  ಹಿಂದಿ ಕಿರುತೆರೆ ನಟ ಪರ್ವ್ ವಿ. ಪುರಿ ಬಂಧನ

ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಹಿಂದಿ ಕಿರುತೆರೆ ನಟ ನಾಗಿನ್ -3 ಖ್ಯಾತಿಯ ಪರ್ವ್ ವಿ. ಪುರಿ ಸೇರಿ ಆರು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಕಿರುತೆರೆ ನಟ ಸೇರಿದಂತೆ 6 ಮಂದಿಯನ್ನು ಮುಂಬೈ ವಾಲಿವ್ ಪೊಲೀಸರು ಬಂಧಿಸಿದ್ದಾರೆ.

 

ಕಾರಿನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ ನಂತರ ನಟ ಸೇರಿದಂತೆ ಇತರರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ನೀಡಿದ ದೂರಿನ ಅನ್ವಯ ಮುಂಬೈನ ವಾಲಿವ್ ಪೊಲೀಸ್ ಪರ್ವ್ ವಿ ಪುರಿ ಸೇರಿದಂತೆ 6ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

ಆದರೆ ಈ ಆಪಾದನೆಯ ವಿರುದ್ಧ ಅನೇಕ ನಟ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ವ್ ವಿ. ಪುರಿಯನಿ ನಾವು ಚೆನ್ನಾಗಿ ಬಲ್ಲೆವು. ಅವರು ಈ ರೀತಿಯ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಸದ್ಯದಲ್ಲಿಯೇ ಸತ್ಯ ಹೊರಬರುತ್ತದೆ ಎಂದು ಅವರ ಜೊತೆ ನಟಿಸಿದ್ದ ಅನೇಕ ನಟಿಯರು ಪೋಸ್ಟ್ ಶೇರ್ ಮಾಡುವ ಮೂಲಕ ಪರ್ವ್ ಜೊತೆ ನಾವಿದ್ದೇವೆ ಎಂದು ಹಂಚಿಕೊಂಡಿದ್ದಾರೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು