News Karnataka Kannada
Saturday, April 20 2024
Cricket
ಮನರಂಜನೆ

ನಾಳೆ ಸುದೀಪ್ ಹುಟ್ಟು ಹಬ್ಬ: ಮನೆಗೆ ಬರದಂತೆ ಅಭಿಮಾನಿಗಳಲ್ಲಿ ಕಿಚ್ಚ ಮನವಿ

Photo Credit :

ನಾಳೆ ಸುದೀಪ್ ಹುಟ್ಟು ಹಬ್ಬ: ಮನೆಗೆ ಬರದಂತೆ ಅಭಿಮಾನಿಗಳಲ್ಲಿ ಕಿಚ್ಚ ಮನವಿ

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ನಾಳೆ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಇದೀಗ ತಮ್ಮ ಅಭಿಮಾನಿಗಳ ಬಳಿ ಮನವಿಯನ್ನು ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ.

ಕೊರೊನಾ ಸೋಂಕು ಇರುವುದರಿಂದ ಈ ವರ್ಷ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿಲ್ಲ. ಆದ್ದರಿಂದ ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಮನೆ ಹತ್ತಿರ ಬರಬಾರದೆಂಬ ನಿರ್ಧಾರವನ್ನು ಕೈಗೊಂಡಿದ್ದೇನೆ ಎಂದು ಕಿಚ್ಚ ಮನವಿ ಮಾಡಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ‘ಸ್ನೇಹಿತರಾದ ನಿಮಗೆಲ್ಲಾ ಒಂದು ಸಣ್ಣ ಮನವಿ. ಬಹಳ ವರ್ಷಗಳಿಂದ ನಿಮ್ಮನ್ನೆಲ್ಲಾ ಭೇಟಿಯಾಗುವುದು ಒಂದು ಸಂಸ್ಕೃತಿಯಂತಾಗಿದೆ ಹಾಗು ಬೇರೆ ಯಾವುದೇ ಸಂತೋಷ ಅದನ್ನು ಬದಲಾಯಿಸಲು ಆಗದು ಶುಭಾಶಯ ಕೋರಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ನಿಮ್ಮೊಂದಿಗೆ ಒಂದು ದಿನ ಪೂರ್ತಿ ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿತ್ತು,, ಸದ್ಯದ ಪರಿಸ್ಥಿತಿ ಅನುಮತಿಸುತ್ತಿಲ್ಲ ಅಥವ ಬೆಂಬಲಿಸುತ್ತಿಲ್ಲ,,, ನಿಮ್ಮೆಲ್ಲರನ್ನೂ ಭೇಟಿಯಾಗಲು ಯಾವುದೇ ಆಚರಣೆ ಅಥವಾ ಯಾವುದೇ ಕಾರ್ಯಕ್ರಮ ಇರುವುದಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ. ನಾನು ನಿಮ್ಮೆಲ್ಲರ ಹಾಗೂ ನನ್ನ ವಯಸ್ಸಾಗುತ್ತಿರುವ ಹೆತ್ತವರ ಆರೋಗ್ಯವನ್ನು ಗಮನದಲ್ಲಿಟ್ಟುಬೇಕಾಗುತ್ತೆ.. ಬೃಹತ್ ಒಟ್ಟುಗೂಡವಿಕೆ ಅಂದರೆ,,, 10 ಹೆಜ್ಜೆ ಹಿಂದಿಟ್ಟು ಯಾವುದನ್ನು ತೊಲಗಿಸಲು ಪ್ರಯತ್ನಿಸುತ್ತಿದ್ದೇವೋ ಅದನ್ನು ಮತ್ತೆ ಆಮಂತ್ರಿಸಿದಂತೆ‘ ಎಂದು ತಮ್ಮ ಅಭಿಮಾನಿಗಳಿಗೆ ದೀರ್ಘವಾದ ಬರವಣಿಗೆಯಲ್ಲಿ ಮನವಿಯನ್ನು ಮಾಡಿದ್ದಾರೆ.

1973ರಲ್ಲಿ ಹುಟ್ಟಿದ ಸುದೀಪ್ ಅವರು ಸ್ಪರ್ಶ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕೂ ಮುನ್ನ ತಯವ್ವ ಹಾಗೂ ಪ್ರತ್ಯರ್ಥದಲ್ಲಿ ಸಹ ನಟನಾಗಿ ನಟಿಸಿದ್ದರು. ಇದೀಗ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿದ್ದಾರೆ. ‌

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು