News Karnataka Kannada
Wednesday, April 24 2024
Cricket
ಮನರಂಜನೆ

ನನ್ನನ್ನು ಬಿಂಬಿಸಿದ ರೀತಿ ನೋವಾಗಿದೆ: ನಿರೂಪಕಿ ಅನುಶ್ರೀ

Photo Credit :

ನನ್ನನ್ನು ಬಿಂಬಿಸಿದ ರೀತಿ ನೋವಾಗಿದೆ: ನಿರೂಪಕಿ ಅನುಶ್ರೀ

ಬೆಂಗಳೂರು: ಡ್ರಗ್ಸ್‌ ಜಾಲಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿಯಿಂದ ವಿಚಾರಣೆಗೆ ಒಳಪಟ್ಟ ನಿರೂಪಕಿ ಅನುಶ್ರೀ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಸುದ್ದಿಗಳು, ಮಾತುಗಳ ಬಗ್ಗೆ ಸ್ವತಃ ಅವರೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸೆಪ್ಟೆಂಬರ್ 24, 2020, ನನ್ನ ಜೀವನದ ಯಾವ ಘಟ್ಟದಲ್ಲಿಯೂ ನಾನು ಮತ್ತೆ ನೆನಪಿಸಿಕೊಳ್ಳಲು ಇಷ್ಟಪಡದಿರುವ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಗೆದ್ದಾಗ ಅದರಿಂದ ನನಗೆ ಮುಂದೆ ಜೀವನದಲ್ಲಿ ಇದು ಮುಳ್ಳಾಗಬಹುದು ಎಂದು ಅಂದುಕೊಂಡಿರಲಿಲ್ಲ. ಈ ವಿಡಿಯೊವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಜನರಿಂದ ಕರುಣೆ ಪಡೆದುಕೊಳ್ಳಲು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಸಿಬಿ ನೊಟೀಸ್ ಬಂದು ವಿಚಾರಣೆಗೆ ಹಾಜರಾದ ನಂತರ ಹಲವರು ಹಲವು ರೀತಿಯಲ್ಲಿ ನನ್ನ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಸ್ಪಷ್ಟನೆ ಕೊಡಲು ನಾನು ವಿಡಿಯೊವನ್ನು ಮಾಡಿ ಹಾಕಿದ್ದೇನೆ, ನನಗೆ ಸಿಸಿಬಿ ನೊಟೀಸ್ ಬಂದಿದ್ದು ಬೇಸರವಾಗಿಲ್ಲ, ನೊಟೀಸ್ ಬಂದು ನಾನು ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ಆರೋಪಿ ಎಂದೊ, ಅಪರಾಧಿ ಎಂದೊ ಅರ್ಥವಲ್ಲ, ಆದರೆ ನಂತರ ನನ್ನನ್ನು ಬಿಂಬಿಸಿದ ರೀತಿ ತುಂಬಾ ಬೇಸರವನ್ನುಂಟುಮಾಡಿದೆ ಎಂದು ಹೇಳಿದ್ದಾರೆ.

ಒಂದು ವಾರದಿಂದ ನನ್ನ ಮತ್ತು ನನ್ನ ಕುಟುಂಬದವರ ನೆಮ್ಮದಿ ಹಾಳಾಗಿ ಹೋಗಿದೆ. ಈ ಕಷ್ಟಕಾಲದಲ್ಲಿ ನನ್ನ ಜೊತೆಗೆ ನಿಂತ ಕನ್ನಡಿಗರಿಗೆ, ನನಗೆ ಅನ್ನ ಹಾಕಿದ ಸಂಸ್ಥೆಗೆ, ಜೀ ಕನ್ನಡ ವಾಹಿನಿಯ ಸಿಬ್ಬಂದಿಗೆ ನಾನು ಋಣಿಯಾಗಿದ್ದೇನೆ. ಅವರ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ, ನನಗೆ ಹೆಸರು, ಯಶಸ್ಸು ತಂದುಕೊಟ್ಟಿದ್ದು ಇದೇ ಕನ್ನಡ ಜನತೆ, ಅದಕ್ಕೆ ಧಕ್ಕೆಯನ್ನುಂಟುಮಾಡುವ ತಪ್ಪು ಕೆಲಸವನ್ನು ಈ ಹಿಂದೆ ಮಾಡಿಲ್ಲ, ಇನ್ನು ಮುಂದೆ ಮಾಡುವುದೂ ಇಲ್ಲ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು