News Karnataka Kannada
Thursday, April 25 2024
Cricket
ಮನರಂಜನೆ

ನಟ ರಾಹುಲ್ ವೋಹ್ರಾ ಕೋವಿಡ್ ಗೆ ಬಲಿ

Photo Credit :

ನಟ ರಾಹುಲ್ ವೋಹ್ರಾ ಕೋವಿಡ್ ಗೆ ಬಲಿ

ದೆಹಲಿ :ಕೊರೊನಾ ಸೋಂಕಿನಿಂದ ಸಾಯುತ್ತಿರುವ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಪ್ರತಿ ದಿನ ಒಂದಲ್ಲ ಒಂದು ಕಲಾವಿದರನ್ನು ಈ ಮಹಾಮಾರಿ ಬಲಿ ತೆಗೆದುಕೊಳ್ಳುತ್ತಿದೆ. ಈಗ ನಟ ರಾಹುಲ್​ ವೋಹ್ರಾ ಕೋವಿಡ್ ನಿಂದ ನಿಧನರಾಗಿದ್ದಾರೆ.

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ (ಮೇ9) ಕೊನೆಯುಸಿರೆಳೆದರು. ಅದಕ್ಕೂ ಒಂದು ದಿನ ಮುಂಚೆ ಅವರು ಉತ್ತಮ ಚಿಕಿತ್ಸೆ ಬೇಕು ಎಂದು ಸೋಶಿಯಲ್​ ಮೀಡಿಯಾ ಮೂಲಕ ನರೇಂದ್ರ ಮೋದಿ ಅವರನ್ನು ಕೈ ಮುಗಿದು ಬೇಡಿಕೊಂಡಿದ್ದರು.

‘ನನಗೂ ಒಳ್ಳೆಯ ಚಿಕಿತ್ಸೆ ಸಿಕ್ಕಿದ್ದಿದ್ದರೆ ನಾನು ಕೂಡ ಬದುಕುತ್ತಿದ್ದೆ. ಮತ್ತೆ ಜನ್ಮತಾಳಿ ಬಂದು ಒಳ್ಳೆಯ ಕೆಲಸ ಮಾಡುತ್ತೇನೆ’ ಎಂದು ಶನಿವಾರ ಫೇಸ್​ಬುಕ್​ನಲ್ಲಿ ರಾಹುಲ್​ ಬರೆದುಕೊಂಡಿದ್ದರು. ತಾವಿರುವ ಆಸ್ಪತ್ರೆಯ ಹೆಸರು, ತಮ್ಮ ವಯಸ್ಸು, ಬೆಡ್ ಸಂಖ್ಯೆ ಮುಂತಾದ ವಿವರಗಳನ್ನು ಈ ಪೋಸ್ಟ್​ನಲ್ಲಿ ಬರೆದು, ದಯವಿಟ್ಟು ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಹುಲ್​ ವೋಹ್ರಾ ಟ್ಯಾಗ್​ ಮಾಡಿದ್ದರು.

ಕೆಲವೇ ದಿನಗಳ ಹಿಂದೆ ರಾಹುಲ್​ ಅವರಿಗೆ ಕೊರೊನಾ ವೈರಸ್​ ತಗುಲಿತ್ತು. ಆ ಬಗ್ಗೆ ಅವರು ಅಸಹಾಯಕತೆಯಿಂದ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ‘ನನಗೆ ಕೊವಿಡ್​ ಪಾಸಿಟಿವ್​ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾಲ್ಕು ದಿನದಿಂದ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ. ನನಗೆ ಎಲ್ಲಿ ಆಕ್ಸಿಜನ್​ ಬೆಡ್​ ಸಿಗಬಹುದು? ನನ್ನ ಆಕ್ಸಿಜನ್​ ಮಟ್ಟ​ ಕಡಿಮೆ ಆಗುತ್ತಲೇ ಇದೆ. ಇಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ರಾಹುಲ್​ ಅಂಗಲಾಚಿದ್ದರು.

ಅವರು ನಿಧನರಾಗಿರುವ ಸುದ್ದಿಯನ್ನು ನಟ, ನಿರ್ದೇಶಕ, ನಾಟಕಕಾರ ಅರವಿಂದ್​ ಗೌರ್​​ ಖಚಿತ ಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು