News Karnataka Kannada
Thursday, April 18 2024
Cricket
ಮನರಂಜನೆ

ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲು

Photo Credit :

ನಟಿ ಸಂಜನಾ ಗಲ್ರಾನಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ತಳುಕು ಹಾಕಿಕೊಂಡು ಮೇಲಿಂದ ಮೇಲೆ ಸುದ್ದಿಯಾಗಿ ಬಳಿಕ ನೇಪಥ್ಯಕ್ಕೆ ಸರಿದಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

ಹೌದು! ಈ ಬಾರಿ ಎಫ್ಐಆರ್ ಆದದ್ದು ಡ್ರಗ್ಸ್ ವಿಷಯದಲ್ಲಿ ಅಲ್ಲ. ಈ ಸಂದರ್ಭ ಅವರ ಮೇಲೆ ಕೇಸ್​ ಬೀಳಲು ಕಾರಣ ವಿಸ್ಕಿ ಎರಚಿ ಹಲ್ಲೆ ಮಾಡಿದ್ದು. ಈ ಆರೋಪದ ಹಿನ್ನೆಲೆಯಲ್ಲಿ ಅವರ ಮೇಲೆ ಎಫ್​ಐಆರ್ ದಾಖಲಾಗಿದೆ.

ಬೆಂಗಳೂರಿನ ಕಬ್ಬನ್​ಪಾರ್ಕ್​ ಪೊಲೀಸರು ಎಫ್​ಐಆರ್ ದಾಖಲಿಸಿದ್ದು, ಕೋರ್ಟ್ ಆದೇಶದನ್ವಯ ಅವರು ಈ ಕ್ರಮ ಜರುಗಿಸಿದ್ದಾರೆ. ಮಾಡೆಲ್ ವಂದನಾ ಜೈನ್ ಎಂಬಾಕೆ ನೀಡಿದ್ದ ದೂರಿನನ್ವಯದ ಪ್ರಕರಣ ಇದಾಗಿದೆ. ಈ ಮೂಲಕ ಸಂಜನಾ-ವಂದನಾ ನಡುವಿನ ಹಳೇ ಗಲಾಟೆ ಕುರಿತ ಕೇಸ್​ಗೆ ಮರುಜೀವ ಬಂದಂತಾಗಿದೆ.

2019ರಲ್ಲಿ ಲ್ಯಾವೆಲ್ಲೆ ರಸ್ತೆಯ ಕ್ಲಬ್​ವೊಂದರಲ್ಲಿ ಗಲಾಟೆ ನಡೆದಿತ್ತು. ಇಲ್ಲಿ ವಂದನಾ-ಸಂಜನಾ ನಡುವೆ ಗಲಾಟೆ ನಡೆದಿತ್ತು. ವಂದನಾ ಸ್ನೇಹಿತನ ಜತೆ ವಂದನಾ ವಿರುದ್ಧವೇ ಅವಹೇಳನಕಾರಿಯಾಗಿ ಸಂಜನಾ ಮಾತನಾಡಿದ್ದರು ಎನ್ನಲಾಗಿದ್ದು, ನಂತರ ನಡೆದ ಜಗಳದಲ್ಲಿ ಸಂಜನಾ ತನಗೆ ವಿಸ್ಕಿ ಎರಚಿ ಹಲ್ಲೆ ಮಾಡಿ, ಕಣ್ಣಿಗೂ ಗಾಯ ಮಾಡಿದ್ದರು ಎಂಬುದಾಗಿ ವಂದನಾ ದೂರು ನೀಡಿದ್ದರು.

 ಘಟನೆ ಬಳಿಕ ಸಂಜನಾ ಬೆದರಿಕೆಯನ್ನೂ ಹಾಕಿದ್ದರು ಎಂಬ ಆರೋಪವೂ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನೀಡಿದ ಸೂಚನೆ ಮೇರೆಗೆ ಪೊಲೀಸರು ಸಂಜನಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು