News Karnataka Kannada
Tuesday, April 23 2024
Cricket
ಮನರಂಜನೆ

ತೆಲುಗು ನಟ ಜೂನಿಯರ್ ಎನ್ ಟಿ ಆರ್ ಗೆ ಕೊರೋನಾ ಸೋಂಕು ದೃಢ

Photo Credit :

ತೆಲುಗು ನಟ ಜೂನಿಯರ್ ಎನ್ ಟಿ ಆರ್ ಗೆ ಕೊರೋನಾ ಸೋಂಕು ದೃಢ

ಚೆನ್ನೈ: ತೆಲುಗು ಖ್ಯಾತ ನಟ ಜೂನಿಯರ್ ಎನ್ ಟಿ ಆರ್ ಗೆ ಕೊರೋನಾ ದೃಢಪಟ್ಟಿತು ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. 

 

ಕೆಲವು ದಿನಗಳ ಹಿಂದೆಯಷ್ಟೇ, ಆರ್ ಆರ್ ಆರ್ ಚಿತ್ರ ತಂಡ ಕೋವಿಡ್‌ ಬಗ್ಗೆ ಜಾಗೃತಿ ಮೂಡಿಸುವ ಒಂದು ವಿಡಿಯೋ ತುಣುಕನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಜೂನಿಯರ್ ಎನ್ ಟಿ ಆರ್ ಕನ್ನಡದಲ್ಲೇ ಜಾಗೃತಿ ಮೂಡಿಸಿದ್ದರು. ಹಾಗೂ ಈ ಮೂಲಕ ಎಲ್ಲಾ ಕನ್ನಡಿಗರ ಗಮನಸೆಳೆದಿದ್ದರು.

 

ಇದೀಗ ಅವರಿಗೆ ಕೋವಿಡ್ ದೃಢಪಟ್ಟಿರುವುದಾಗಿ ತಿಳಿದುಬಂದಿದ್ದು, ʻನನಗೆ ಕೊರೊನಾ ಬಂದಿದೆ. ಯಾರೂ ಅತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬಸ್ಥರು ಮನೆಯಲ್ಲೇ ಕ್ವಾರೆಂಟೈನ್​ ಆಗಿದ್ದೇವೆ. ವೈದ್ಯರ ನಿಗಾದಲ್ಲಿ ನಾವೆಲ್ಲ ಸಮರ್ಪಕವಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಜಾಗ್ರತೆ ವಹಿಸಿʼ ಎಂದು ಹೇಳಿದ್ದಾರೆ. 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು