News Karnataka Kannada
Sunday, April 21 2024
Cricket
ಮನರಂಜನೆ

ತೆಲುಗು ಕಿರುತೆರೆ ನಟಿ ಮನೆಯಲ್ಲೇ ಆತ್ಮಹತ್ಯೆ

Photo Credit :

ತೆಲುಗು ಕಿರುತೆರೆ ನಟಿ ಮನೆಯಲ್ಲೇ ಆತ್ಮಹತ್ಯೆ

ಹೈದರಾಬಾದ್: ತೆಲುಗಿನ ಕಿರುತೆರೆ ನಟಿ ಕೊಂಡಪಳ್ಳಿ ಶ್ರಾವಣಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವರು ಎಂದು ಪೊಲೀಸರು ಬುಧವಾರ ತಿಳಿಸಿರುವರು.

ಮಧುರಾನಗರದಲ್ಲಿ ಇರುವ ಮನೆಯಲ್ಲಿ 26ರ ಹರೆಯದ ನಟಿಯ ಶವವು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿರುವರು.

ಆಕೆ ತನ್ನ ಬೆಡ್ ರೂಮ್ ನೊಳಗೆ ಹೋಗಿ ಬಾಗಿಲು ಹಾಕಿಕೊಂಡಳು ಮತ್ತು ಇದರ ಬಳಿಕ ಆಕೆ ಬಾಗಿಲು ತೆರೆಯಲಿಲ್ಲ. ಎಲ್ಲರು ಆಕೆ ಸ್ನಾನ ಮಾಡುತ್ತಿರಬಹುದು ಎಂದು ಭಾವಿಸಿದ್ದರು. ಆದರೆ ತುಂಬಾ ಹೊತ್ತು ಹೊರಬರದಾಗ ಬಾಗಿಲು ಒಡೆದು ಒಳಪ್ರವೇಶಿಸಿದ ವೇಳೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಮನೆಯವರು ತಿಳಿಸಿರುವರು.

ಆಕೆಯನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಮೃತಪಟ್ಟಿದ್ದಳು. ಆಕೆಯ ಮಾಜಿ ಪ್ರಿಯತಮ ದೇವರಾಜ್ ರೆಡ್ಡಿ ಕಿರುಕುಳ ನೀಡುತ್ತಿದ್ದ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು