News Karnataka Kannada
Tuesday, April 23 2024
Cricket
ಮನರಂಜನೆ

ಡ್ರಗ್ಸ್ ಮಾಫಿಯಾ: ನಾಳೆ ದೀಪಿಕಾ ಪಡುಕೋಣೆ ವಿಚಾರಣೆ

Photo Credit :

ಡ್ರಗ್ಸ್ ಮಾಫಿಯಾ: ನಾಳೆ ದೀಪಿಕಾ ಪಡುಕೋಣೆ ವಿಚಾರಣೆ

ಬಾಲಿವುಡ್ ಡ್ರಗ್ಸ್ ಮಾಫಿಯಾ ವಿಚಾರಣೆ ಸಂಬಂಧ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್‌ಗೆ ಎನ್ ಸಿಬಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನ್ನು ಜಾರಿ ಮಾಡಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನಿಂದ ತೆರೆದುಕೊಂಡ ಡ್ರಗ್ಸ್ ಜಾಲದಲ್ಲಿ ಹೆಸರಾಂತ ನಟಿಯರ ಹೆಸರುಗಳು ಹೊರಬಿದ್ದಿತ್ತು. ಈ ಸಂಬಂಧ ಎನ್‌ಸಿಬಿ ‌ಇಂದು ನಟಿ ರಕುಲ್ ಪ್ರೀತ್ ಸಿಂಗ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನ್ನು ನೀಡಿದೆ.

ನಾಳೆ ದೀಪಿಕಾ ಪಡುಕೋಣೆ, ಫ್ಯಾಷನ್ ಡಿಸೈನರ್ ಸಿಮೋನೆ ಖಂಬಟ್ವಾ ಅವರನ್ನು ವಿಚಾರಣಗೆ ಹಾಜರಾಗುವಂತೆ ಹೇಳಿದೆ.

ಶನಿವಾರ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ನಟಿ ರಿಯಾ ಚಕ್ರವರ್ತಿಯ ಮೊಬೈಲ್ ಫೋನ್‍ನಿಂದ ಮರುಪಡೆಯಲಾದ ವಾಟ್ಸಾಪ್ ಸಂದೇಶಗಳ ಆಧಾರದ ಮೇಲೆ ಮಾದಕಗಳ ನಿಯಂತ್ರಣ ಬ್ಯೂರೋ ಸಲ್ಲಿಸಿದ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಅವರ ವ್ಯವಹಾರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರನ್ನು ಶುಕ್ರವಾರ ಪ್ರಶ್ನಿಸಲಾಗುವುದು. ವಿಶೇಷವೆಂದರೆ ಈ ಪ್ರಕರಣದಲ್ಲಿ ಇಲ್ಲಿವರೆಗೆ ಯಾವುದೇ ಡ್ರಗ್ಸ್ ವಶಪಡಿಸಿಕೊಳ್ಳಾಗಿಲ್ಲ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು