News Karnataka Kannada
Monday, April 15 2024
Cricket
ಮನರಂಜನೆ

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

Photo Credit :

ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಬೆಂಗಳೂರು : ಕನ್ನಡ ಸಿನಿರಂಗದ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ಕೊರೋನಾ ಪೋಸಿಟಿವ್ ಆಗಿತ್ತು. ಇದೀಗ ಅದರಿಂದ ಚೇತರಿಸಿಕೊಂಡ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

 

ಮೂರು ವಾರಗಳಿಂದ ಕೋವಿಡ್ ಪಾಸಿಟಿವ್’ನಿಂದ ನರಳಿದ್ದಾಗಿ ಹೇಳಿಕೊಂಡಿರುವ ನಟ ಸುದೀಪ್, “ ನನ್ನ ಆರೋಗ್ಯದ ಬಗ್ಗೆ ಹಲವರಿಗೆ ಗೊಂದಲ ಇತ್ತು . ಈ ವೇಳೆ ಕೊರೋನಾ ಬಿಟ್ಟರೆ ಇನ್ನೇನಿರುತ್ತದೆ ಹೇಳಿ . ಮೂರು ವಾರಗಳ ಹಿಂದೆ ` ಬಿಗ್ ಬಾಸ್ ‘ ಕಾರ್ಯಕ್ರಮ ನಡೆಸಿಕೊಡುವ ವೇಳೆ ಕಾಲುಗಳಲ್ಲಿ ಸಣ್ಣ ಪ್ರಮಾಣದ ನೋವು ಕಾಣಿಸಿಕೊಂಡಿತು . ಎಪಿಸೋಡ್ ಶೂಟಿಂಗ್ ಮುಗಿಯುವ ಹೊತ್ತಿಗೆ ಸುಸ್ತು ಜಾಸ್ತಿಯಾಯಿತು . ಮನೆಗೆ ಬಂದ ಮೇಲೆ ಕಾಲು ಮತ್ತು ಪಾದಗಳ ನೋವು ಹೆಚ್ಚಾಯಿತು . ವಿಶ್ರಾಂತಿ ಪಡೆಯಬೇಕು ಎಂದೆನಿಸಿತು . ಎರಡನೇ ದಿನದ ಹೊತ್ತಿಗೆ ಚಿಕಿತ್ಸೆ ಪಡೆಯದಿದ್ದರೆ ಬಹಳ ಕಷ್ಟ ಎಂಬುದು ಅರ್ಥವಾಗಿ ಚಿಕಿತ್ಸೆಗೆ ಒಳಗಾದೆ ‘ ಎಂದು ವಿವರಿಸಿದ್ದಾರೆ. 

 

ಅಷ್ಟೇ ಅಲ್ಲದೆ ಆ ಸಮಯದಲ್ಲಿ ಅವರಿಗೆ ಉಂಟಾದ ಭಾವನೆಗಳ ಬಗ್ಗೆ ಹೇಳಿಕೊಂಡಿರುವ ಸುದೀಪ್, ಕೊರೋನಾದಿಂದ ಹೇಗೆ ಹೊರಗೆ ಬಂದೆ ಎಂದು ಟಿಪ್ಸ್ ಕೊಡುವುದು ಬಹಳ ಕಷ್ಟ. ಒಬ್ಬೊಬ್ಬರ ದೇಹ ಒಂದೊಂದು ರೀತಿ ಇರುತ್ತದೆ . ಆದರೆ ಸರಳವಾಗಿ ಹೇಳಬೇಕೆಂದರೆ , ಈ ಸಮಯದಲ್ಲಿ ಚಿಕಿತ್ಸೆ ಪಡೆಯುತ್ತ ಮನೆಯಲ್ಲಿ ಸುಮ್ಮನೆ ಇದ್ದು ಬಿಡಿ , ಕಳೆದ ಮೂರು ವಾರಗಳಿಂದ ನಾನು ಮನೆಯಲ್ಲಿ ಒಬ್ಬನೇ ಇದ್ದೇನೆ . ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಹೈದರಾಬಾದ್‌ನಲ್ಲಿದ್ದಾರೆ. ಇಂತಹಾ ಸಮಯದಲ್ಲಿ ನಾನು ಮತ್ತೆ ಎದ್ದುಬರಲು ಸಾಧ್ಯವಾ . ನನ್ನನ್ನು ಪ್ರೀತಿಸುವವರ ಜತೆಗೆ ಮಾತನಾಡುವುದಕ್ಕೆ ಸಾಧ್ಯವಾ ಎಂದೆಲ್ಲಾ ಯೋಚನೆ ಬರುತ್ತಿತ್ತು . ಒಮ್ಮೊಮ್ಮೆ ಭಯ ಆಗುತ್ತಿತ್ತು . ಮನುಷ್ಯನಿಗೆ ಭಯ ಇರಬೇಕು . ಆ ಭಯ ಇದ್ದಾಗಲೇ ನಾವು ಏನೆಲ್ಲ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವೋ ಅವೆಲ್ಲವನ್ನೂ ತೆಗೆದುಕೊಳ್ಳುತ್ತೇವೆ ‘ ಎಂದು ವಿವರವಾಗಿ ತಮ್ಮ ಅನುಭವದ ಮಾತುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು