News Karnataka Kannada
Tuesday, April 23 2024
Cricket
ಮನರಂಜನೆ

ಕೊರೊನಾ ಪೀಡಿತರಿಗಾಗಿ 1 ಕೋಟಿ ರೂ ದೇಣಿಗೆ ನೀಡಿದ ನಟ

Photo Credit :

ಕೊರೊನಾ ಪೀಡಿತರಿಗಾಗಿ 1 ಕೋಟಿ ರೂ ದೇಣಿಗೆ ನೀಡಿದ ನಟ

ನವದೆಹಲಿ: ದೇಶದಲ್ಲಿ ಕೊರೊನಾ ಮಿತಿಮೀರಿ ಏರಿಕೆ ಕಾಣುತ್ತಿದೆ. ಇದರ ನಿಯಂತ್ರಣಕ್ಕೆ ಸರ್ಕಾರಗಳು ಸಾಕಷ್ಟು ಪ್ರಯತ್ನ ಪಡುತ್ತಿವೆ. ಇನ್ನು ಅನೇಕ ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್​ಗಳ ಕೊರತೆ ಎದ್ದು ಕಾಣುತ್ತಿದೆ. ಈ ಮಧ್ಯೆ ನಟ ಅಕ್ಷಯ್​ ಕುಮಾರ್​ ಬಹುದೊಡ್ಡ ಸಹಾಯ ಮಾಡಿದ್ದಾರೆ. ಇದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್​ ಗಂಭೀರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟ ಅಕ್ಷಯ್​ ಕುಮಾರ್​ ಗೌತಮ್​ ಗಂಭೀರ್​ ಅವರ ಫೌಂಡೇಷನ್​ಗೆ ಒಂದು ಕೋಟಿ ರೂಪಾಯಿ ಹಣವನ್ನು ನೀಡಿದ್ದು, ಈ ಹಣವನ್ನು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವಂತೆ ಅಕ್ಷಯ್​ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಗೌತಮ್​ ಗಂಭೀರ್​, ‘ಈ ಅಂಧಕಾರದಲ್ಲಿ ಪ್ರತಿಯೊಂದು ಸಹಾಯವು ಭರವಸೆಯ ಕಿರಣವಾಗಿದೆ. ಆಹಾರ, ಔಷಧ ಹಾಗೂ ಆಮ್ಲಜನಕ ಪೂರೈಕೆಗೆ ಜಿಜಿಎಫ್​ಗೆ ಒಂದು ಕೋಟಿ ರೂ. ದಾನ ಮಾಡಿದ್ದಕ್ಕೆ ಧನ್ಯವಾದಗಳು. ದೇವರು ಒಳ್ಳೆಯದು ಮಾಡಲಿ’ ಎಂದಿದ್ದಾರೆ.

ಇದಕ್ಕೆ ಉತ್ತರಿಸಿರುವ ಅಕ್ಷಯ್​ ಕುಮಾರ್​, ಇದು ತುಂಬಾನೇ ಕಷ್ಟದ ಸಮಯ. ನಾನು ಸಹಾಯ ಮಾಡುತ್ತಿರುವುದಕ್ಕೆ ಖುಷಿ ಇದೆ. ಈ ಸಂಕಷ್ಟ ಆದಷ್ಟು ಬೇಗ ಕೊನೆಯಾಗಲಿ ಎಂದು ಆಶಿಸೋಣ ಎಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು