Ad

ಮಂಗಳೂರು: ಅಲೋಶಿಯಸ್ ವಿವಿಯಲ್ಲಿ ಹೊಸ ಪದವಿ ಕೋರ್ಸುಗಳ ಆರಂಭ

St Aloysius

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಬ್ಯಾಚ್ಯುಲರ್ ಆಫ್ ವೊಕೇಶನ್ ವಿಭಾಗದಲ್ಲಿ ಈ ಶೈಕ್ಷಣಿಕ ವರ್ಷದಿಂದ ‘ಸ್ಪೋರ್ಟ್ಸ್, ಥೆರಪಿ ಮತ್ತು ನ್ಯೂಟ್ರಿಶನ್’ ಹಾಗೂ ‘ರಿಟೇಲ್ ಎಂಡ್ ಲಾಜಿಸ್ಟಿಕ್ ಮ್ಯಾನೇಜ್‍ಮೆಂಟ್’ ಎಂಬ ಎರಡು ವಿಷಯಗಳಲ್ಲಿ ನೂತನ ಪದವಿ ತರಗತಿಗಳುನ್ನು ಪ್ರಾರಂಭವಾಗಿದ್ದು, ಪ್ರವೇಶ ಪ್ರಕ್ರಿಯೆಯು ಆರಂಭವಾಗಿದೆ.

Ad
300x250 2

2015ರಿಂದ ಸಂತ ಅಲೋಶಿಯಸ್‍ನಲ್ಲಿ ಕೇಂದ್ರ ಸರಕಾರದ ಯೋಜನೆಯಾದ ದೀನ್ ದಯಾಳ್ ಕೌಶಲ್ಯ ಕೇಂದ್ರದ ವತಿಯಿಂದ ವಿವಿಧ ವೊಕೇಶನಲ್ ಪದವಿ ಕೋರ್ಸ್‍ಗಳು ನಡೆಯುತ್ತಿದ್ದು, ಈ ವರ್ಷದಲ್ಲಿ ಸೇರ್ಪಡೆಗೊಂಡಿರುವ ಎರಡೂ ಕೋರ್ಸುಗಳು ಅತೀ ಹೆಚ್ಚು ಬೇಡಿಕೆಯಿರುವ ಕೌಶಲ್ಯ ಆಧಾರಿತ ಹಾಗೂ ಉದ್ಯೋಗಖಾತ್ರಿಯುಳ್ಳ ಕೋರ್ಸುಗಳಾಗಿವೆ.
St Aloysius (1)

‘ಸ್ಪೋರ್ಟ್ಸ್, ಥೆರಪಿ ಮತ್ತು ನ್ಯೂಟ್ರಿಶನ್’ ಕೋರ್ಸು, ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅತೀ ಹೆಚ್ಚು ಬೇಡಿಕೆಯುಳ್ಳ ಪದವಿ ಕೋರ್ಸಾಗಿದ್ದು,ವಿದ್ಯಾರ್ಥಿಗಳಿಗೆ ಆರೋಗ್ಯಕ್ಷೇತ್ರ, ಆಸ್ಪತ್ರೆ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯಲು ಅವಕಾಶವಿದೆ. ‘ರಿಟೇಲ್ ಎಂಡ್ ಲಾಜಿಸ್ಟಿಕ್ ಮ್ಯಾನೇಜ್‍ಮೆಂಟ್’ ಪದವಿ ಕೋರ್ಸಿಗೆ ಜಗತ್ತಿನಾದ್ಯಂತ ಬೇಡಿಕೆಯಿದ್ದು, ಎಲ್ಲಾ ರೀತಿಯ ವ್ಯವಹಾರ ಕ್ಷೇತ್ರ, ರಿಟೇಲ್ ಕ್ಷೇತ್ರ ಮತ್ತು ಆನ್‍ಲೈನ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಅವಕಾಶವಿರುತ್ತದೆ.

ಶೇಕಡಾ 60ರಷ್ಟು ಪ್ರಾಕ್ಟಿಕಲ್ ಆಧಾರಿತ ಈ ಕೋರ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಸೆಮೆಸ್ಟರ್‍‍ಗಳಲ್ಲೂ ಇಂಟರ್ನ್‍ಶಿಪ್ ಅವಕಾಶವಿರುತ್ತದೆ. ಪರವೂರಿನ ವಿದ್ಯಾರ್ಥಿಗಳಿಗೆ ಉಚಿತ ಸರಕಾರಿ ಹಾಸ್ಟೆಲ್ ಸೌಲಭ್ಯವಿದ್ದು, ಸ್ಕಾಲರ್‍ಶಿಪ್ ಕೂಡ ಪಡೆಯಲು
ಅವಕಾಶವಿದೆ. ಆರು ಸೆಮೆಸ್ಟರ್‍ಗಳ ಈ ಪದವಿ ಕೋರ್ಸಿನಲ್ಲಿ ನುರಿತ ಅಧ್ಯಾಪಕರು ಮತ್ತು ಕೈಗಾರಿಕಾ ಪರಿಣತರಿಂದ ತರಗತಿಗಳು ನಡೆಯಲ್ಪಡುತ್ತವೆ.

ಕಲಿಕೆಯ ಅವಧಿಯಲ್ಲಿ ಪಾರ್ಟ್ ಟೈಂ ಕೆಲಸ ಮಾಡಲು ಕೂಡ ಅವಕಾಶವಿದೆ. ಅಲ್ಲದೆ ಈ ಕೇಂದ್ರದಲ್ಲಿ ಎನಿಮೇಶನ್ ಎಂಡ್ ಮಲ್ಟಿಮೀಡಿಯಾ, ಸಾಫ್ಟ್‍ವೇರ್ ಡೆವಲಪ್‍ಮೆಂಟ್,  ರಿನಿವೇಬಲ್ ಎನರ್ಜಿ ಮ್ಯಾನೇಜ್‍ಮೆಂಟ್ ಮುಂತಾದ ಪದವಿ ಕೋರ್ಸುಗಳು ಲಭ್ಯವಿದ್ದು, ಪಿಯು/ತತ್ಸಮಾನ/ಡಿಪ್ಲೋಮಾ ಪಾಸಾದ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬಹುದಾಗಿದೆ.

ಹೆಚ್ಚಿನ ವಿವರಗಳಿಗೆ, ಶ್ರೀ ಶರತ್ ಕುಮಾರ್ ಶೆಟ್ಟಿ, 7847055111 ಇವರನ್ನು ಸಂಪರ್ಕಿಸಬಹುದು.

Ad
Ad
Nk Channel Final 21 09 2023
Ad