ಭಾರತ ಸರ್ಕಾರದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಎಸ್‌ಬಿಐ ಬ್ಯಾಂಕ್ನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಇದಕ್ಕೆ ಅಪ್ಲೇ ಮಾಡಬಹುದು. ಒಂದು ವೇಳೆ ನೀವು ಉದ್ಯೋಗಕ್ಕೆ ಸೆಲೆಕ್ಟ್ ಆದರೆ ಒಂದು ವರ್ಷ ಕಾಲ ಪ್ರೊಬೇಷನ್ ಅವಧಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ಸ್ಯಾಲರಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್)- 64,820 ರೂ.ಗಳು
ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್)- 48,480 ರೂ.ಗಳು
ಉದ್ಯೋಗದ ಹೆಸರು ಹಾಗೂ ಎಷ್ಟು ಹುದ್ದೆಗಳು ಖಾಲಿ ಇವೆ?
ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್), ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ವಿಭಾಗದಲ್ಲಿನ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು ಖಾಲಿ ಇವೆ.
ಒಟ್ಟು 1,511 ಉದ್ಯೋಗಗಳು ಇವೆ.
ವಯೋಮಿತಿ: ಡೆಪ್ಯುಟಿ ಮ್ಯಾನೇಜರ್ (ಸಿಸ್ಟಮ್) 25 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ ಇರುತ್ತದೆ. ಹಾಗೆಯೇ ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) 21 ರಿಂದ 30 ವರ್ಷದ ಒಳಗಿನವರಿಗೆ ಅವಕಾಶ ಇದೆ.
ಅನುಭವ: ಸಾಫ್ಟ್ವೇರ್ ಡೆವಲಪ್ಮೆಂಟ್ನಲ್ಲಿ 4 ವರ್ಷಗಳ ಅನುಭವ ಇರಬೇಕು.
ವಿದ್ಯಾರ್ಹತೆ: ಬಿಟೆಕ್, ಬಿಇ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ ಅಥವಾ ಎಂಟೆಕ್/ ಎಂಎಸ್ಸಿ
ಅರ್ಜಿ ಶುಲ್ಕ: ಜನರಲ್, ಇಡಬ್ಲುಎಸ್, ಒಬಿಸಿ 750 ರೂಪಾಯಿಗಳನ್ನು ಪಾವತಿ ಮಾಡಬೇಕು. ಎಸ್ಸಿ, ಎಸ್ಟಿ, ವಿಶೇಷ ಚೇನತರಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಯಾವ್ಯಾವ ಸ್ಥಳದಲ್ಲಿ ಪೋಸ್ಟಿಂಗ್ ಇರುತ್ತದೆ..?
ನವಿ ಮುಂಬೈ/ಮುಂಬೈ ಹಾಗೂ ಹೈದರಾಬಾದ್
ಈ ಹುದ್ದೆಗೆ ಸಂಬಂಧಿಸಿದ ಮುಖ್ಯ ದಿನಾಂಕಗಳು:
ಅರ್ಜಿ ಆರಂಭದ ದಿನಾಂಕ- 14/09/2024
ಅರ್ಜಿ ಕೊನೆ ದಿನಾಂಕ- 04/10/2024