Bengaluru 22°C

ದೂರದರ್ಶನದಲ್ಲಿ ಹಿರಿಯ ಪ್ರತಿನಿಧಿ ಹುದ್ದೆಗೆ ನೇಮಕಾತಿ

ಬೆಂಗಳೂರು ದೂರದರ್ಶನದ ಕೇಂದ್ರದಲ್ಲಿ ಹಿರಿಯ ಪ್ರತಿನಿಧಿ (Senior Correspondent) ಹುದ್ದೆಗೆ ಪೂರ್ಣಾವಧಿಯಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲು ನುರಿತ ಹಾಗೂ ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ಬೆಂಗಳೂರು ದೂರದರ್ಶನದ ಕೇಂದ್ರದಲ್ಲಿ ಹಿರಿಯ ಪ್ರತಿನಿಧಿ (Senior Correspondent) ಹುದ್ದೆಗೆ ಪೂರ್ಣಾವಧಿಯಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲು ನುರಿತ ಹಾಗೂ ಅನುಭವವುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಅರ್ಜಿ ಸಲ್ಲಿಸ ಬಯಸುವವರು ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ನೈಪುಣ್ಯತೆಯೊಂದಿಗೆ ಕನ್ನಡ ಭಾಷೆಯ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸಲು 2025 ನೇ ಜನವರಿ 30 ಕಡೆಯ ದಿನವಾಗಿದೆ. ಅರ್ಜಿಗಳನ್ನು https://applications.prasarbharati.org ಜಾಲತಾಣದಲ್ಲಿ ಸಲ್ಲಿಸಬಹುದು.


ಹೆಚ್ಚಿನ ಮಾಹಿತಿಗೆ ಜಾಲತಾಣ https://prasarbharati.gov.in/pbvacancies/ ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕರು ತಿಳಿಸಿದ್ದಾರೆ.


Nk Channel Final 21 09 2023