Bengaluru 22°C
Ad

ರೈಲ್ವೆ ಇಲಾಖೆಯಲ್ಲಿನ ಉದ್ಯೋಗಕ್ಕೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್!

ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್ ಒಂದು ಇಲ್ಲಿದೆ.

ರೈಲ್ವೆ ಇಲಾಖೆಯಲ್ಲಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಗುಡ್​ನ್ಯೂಸ್ ಒಂದು ಇಲ್ಲಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್​ಆರ್​ಬಿ) ಎನ್​​ಟಿಪಿಸಿ ಖಾಲಿ ಇರುವಂತ ಹುದ್ದೆಗಳನ್ನ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದೆ.

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆರ್​ಆರ್​ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ರೈಲ್ವೆಯ ಎನ್​​ಟಿಪಿಸಿ ಪದವಿಪೂರ್ವ ಹಂತದ ಮೂರು ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗಬೇಕೆಂದು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ.

ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕವಲ್ಲದ ಉದ್ಯೋಗಗಳು ಇವಾಗಿದ್ದು ಈಗಾಗಲೇ ಅರ್ಜಿ ಆರಂಭವಾಗಿವೆ. ಇಡೀ ದೇಶದ್ಯಾಂತ ಈ ಹುದ್ದೆಗಳನ್ನು ಕಾಲ್​ಫಾರ್ಮ್ ಮಾಡಿದ್ದು ಇದರಲ್ಲಿ ಬೆಂಗಳೂರಿಗೂ ಹುದ್ದೆಗಳು ಮೀಸಲಿವೆ. ಸಿಲಿಕಾನ್​ ಸಿಟಿಗೆ ಒಟ್ಟು 60 ಹುದ್ದೆಗಳಿದ್ದು ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ವಯಸ್ಸಿನ ಮಿತಿ 18 ರಿಂದ 33 ವರ್ಷದ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ. ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 2022, ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್- 361, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 990, ಟ್ರೈನ್ ಕ್ಲರ್ಕ್- 72, ಒಟ್ಟು ಖಾಲಿ ಹುದ್ದೆಗಳು- 3,445. ಅರ್ಜಿ ಶುಲ್ಕ ಜನರಲ್, ಒಬಿಸಿ, ಇಡಬ್ಲುಎಸ್- 500 ರೂಪಾಯಿಗಳು, ಎಸ್​​ಸಿ, ಎಸ್​​ಟಿ, ಪಿಹೆಚ್- 250 ರೂಪಾಯಿಗಳು, ಎಲ್ಲ ವರ್ಗದ ಮಹಿಳೆಯರಿಗೆ- 250 ರೂಪಾಯಿಗಳು, ಅರ್ಜಿ ಶುಲ್ಕವನ್ನು ಆನ್​​ಲೈನ್ ಮೂಲಕ ಪಾವತಿ ಮಾಡಬೇಕು.

ವಿದ್ಯಾರ್ಹತೆ 12ನೇ ತರಗತಿ ಪೂರ್ಣಗೊಳಿಸಿರಬೇಕು, ಜನರಲ್, ಒಬಿಸಿ, ಇಡಬ್ಲುಎಸ್ ಶೇ.50 ರಷ್ಟು ಅಂಕ ಪಡೆದಿರತಕ್ಕದ್ದು, ಟೈಪಿಸ್ಟ್​ಗೆ ಅರ್ಜಿ ಹಾಕುವರು ಇಂಗ್ಲಿಷ್, ಹಿಂದಿ ಟೈಪ್ ಮಾಡಬೇಕು. ಪ್ರಮುಖವಾದ ದಿನಾಂಕಗಳು:ಸೆಪ್ಟೆಂಬರ್ 21, 2024 -ಅರ್ಜಿ ಆರಂಭದ ದಿನಾಂಕ. ಅಕ್ಟೋಬರ್ 22, 2024 -ಅರ್ಜಿ ಕೊನೆ ದಿನಾಂಕವಾಗಿದೆ.

Ad
Ad
Nk Channel Final 21 09 2023